ಹಳೆ ನಾಣ್ಯ, ನೋಟು ಪ್ರದರ್ಶನ


ಅಣ್ಣಿಗೇರಿ,ಸೆ.3: ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಏರ್ಪಡಿಸಿರುವ ಪ್ರದರ್ಶನದ ಅಂಗವಾಗಿ ನಗರದ ಶಾರದಾ ಪಬ್ಲಿಕ್ ಸ್ಕೂಲ್ ಭವನದಲ್ಲಿ ಭಾರತದ ಇತಿಹಾಸವನ್ನು ಸಾಕ್ಷೀಕರಿಸುವಂತಹ ಬೆಳ್ಳಿ, ತಾಮ್ರ, ಹಿತ್ತಾಳೆ ಸೇರಿದಂತೆ ಹಲವು ವಿಭಿನ್ನ ಲಿಪಿಗಳನ್ನು ಒಳಗೊಂಡ ಹಳೆ ನಾಣ್ಯಗಳ ಪ್ರದರ್ಶನ ನಡೆಯಿತು.
ಪ್ರದರ್ಶನವನ್ನು ಉದ್ಘಾಟಿಸಿದ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮಹಾಬಳೇಶ್ ಹೆಬಸುರ ಮಾತನಾಡಿದ ಅವರು , ಶಾಲೆಗಳಲ್ಲಿ ಮಕ್ಕಳಿಗೆ ನಾಣ್ಯಶಾಸ್ತ್ರದ ಬಗ್ಗೆ ತಿಳಿಸುವ ಶಿಕ್ಷಣವಿರಬೇಕು. ನಮ್ಮ ಇತಿಹಾಸದ ಪರಂಪರೆಯನ್ನು ಮುಂದಿನ ಮಕ್ಕಳಿಗೆ ತಿಳಿಸಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಹಿರಿಯ ನಿವೃತ್ತ ಶಿಕ್ಷಕರಾದ ಎಂಎಸ್ ಪೂಜಾರ್, ರವಿರಾಜ್ ವೆರ್ನೇಕರ್. ಪಾಂಡುರಂಗ ಓಶೇಕರ್. ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.