ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ

ಕಲಬುರಗಿ,ನ.9-ಕಲಬುರಗಿ ಆರಾಧ್ಯದೈವ ಶ್ರೀ ಶರಣಬಸವೇಶ್ವರ ರ ಹೆಸರಿನಲ್ಲಿ ಇರುವ ವಾಣಿಜ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಸಮಾರಂಭ ಜರುಗಿತು.
ಮೊದಲಿಗೆ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎನ್.ಎಸ್.ಪಾಟೀಲರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಸಂಘದ ಉದ್ದೇಶಗಳ್ಳನು ವಿವರಿಸಿ, ಎಲ್ಲರನ್ನೂ ಸ್ವಾಗತಿಸಿದರು. ನಂತರ ಹಳೆಯ ವಿದ್ಯಾರ್ಥಿ ಸಂಘವನ್ನು ಅಧಿಕೃತವಾಗಿ ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಪಾಟೀಲ ಅವರು ಉದ್ಘಾಟಿಸಿದರು. ಹಳೆಯ ವಿದ್ಯಾರ್ಥಿ ಹಾಗೂ ನ್ಯಾಯವಾದಿ ಬಸವರಾಜ ಬಿರಾದಾರ ಸೊನ್ನ ಮಾತನಾಡುತ್ತ ಶರಣಬಸವೇಶ್ವರ ಸಂಸ್ಥೆ ಯುಜಿಸಿ ನಿರ್ದೇಶನದಂತೆ ಹಳೆಯ ವಿದ್ಯಾರ್ಥಿಗಳ ಸಂಘದ ಹುಟ್ಟು ಹಾಕಿರುವುದು ನನಗೆ ಅತೀವ ಸಂತೋಷ ಉಂಟುಮಾಡಿದೆ. ನಾನದರು ಕೂಡಾ ತನು ಮನ ಧನದಿಂದ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು. 1990 ರಿಂದ 1995 ರವರೆ ಓದಿದ ಇನ್ನೋರ್ವ ಹಳೆಯ ವಿದ್ಯಾರ್ಥಿ ಹಾಗೂ ನ್ಯಾಯವಾದಿ ಜೇನೆವೆರಿ ವಿನೋದ ಕುಮಾರ ಅವರು ಸಂಘದ ಅಜೀವ ಸದ್ಯಸ್ಯರಾಗಿ ನೋಂದಣಿಗೊಂಡು ಮಾತನಾಡುತ್ತಾ ಕಾಲೇಜಿನ ಮೊದಲ ಪ್ರಾಚಾರ್ಯ ದಿ. ಎಮ್. ಬಿ. ಓಣಿ ಅವರನ್ನು ನೆನೆದು ಭಾವುಕರಾದರು. ಇನ್ನೋವ ಸಂಘದ ಕಾರ್ಯಕರಣಿ ಸದ್ಯಸ್ಯ ಪ್ರದೀಪ ದಾಭಶೆಟ್ಟಿ ಅವರು ಮಾತನಾಡಿ ಸ್ಥಳೀಯವಾಗಿ ನೆಲೆಸಿರುವ ನಮ್ಮ ಗೆಳೆಯರನ್ನು ಮಾತ್ರ ಈ ಕಾರ್ಯಕ್ರಮಕ್ಕೆ ಬರಲು ತಿಳಿಸಲಾಗಿದೆ ಕಾರಣ ಕೋವಿಡ್-19 ನಿಯಮ ಉಲ್ಲಂಘನೆ ಯಾಗಬಾರದು ಎಂದು ಸಭೆಗೆ ತಿಳಿಸಿದರು. ಮುಂದಿನ ಸಭೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಆಹ್ವಾನಿಸಿ ಅದ್ದೂರಿಯಾಗಿ ಮಾಡಲು ನಿರ್ಧರಿಸಲಾಗಿದೆ ಎಂದರು. ಕೊನೆಯಲ್ಲಿ ಸಂಘದ ಕಾರ್ಯದರ್ಶಿ ಶೇಟ್ ಗಾರ ವಂದಿಸಿದರು.