ಹಳೆಯ ವಿದ್ಯಾರ್ಥಿಗಳೇ ಕೆಬಿಎನ್ ವಿವಿಯ ಬೆನ್ನೆಲುಬು : ಡಾ. ನಿಶಾತ ಆರೀಫ್ ಹುಸೇನಿ

ಕಲಬುರಗಿ :ಸೆ.24: ಯಾವುದೇ ವಿಶ್ವವಿದ್ಯಾಲಯದ ಗುಣಮಟ್ಟ ಹಳೆಯ ವಿದ್ಯಾರ್ಥಿಗಳಿಂದಲೇ ತಿಳಿಯುತ್ತದೆ. ಹಳೆಯ ವಿದ್ಯಾರ್ಥಿಗಳ ಯಶಸ್ಸು ವಿವಿಗಳ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತದೆ ಎಂದು ಖಾಜಾ ಬಂದಾನವಾಜ್ ವಿವಿಯ ಕಲಾ, ಭಾಷಾ, ಮಾನವಕತೆ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ನಿಕಾಯದ ಡೀನ್ ಡಾ. ನಿಶಾತ ಆರೀಫ್ ಹುಸೇನಿ ಹೇಳಿದರು.

ನಗರದ ಖಾಜಾ ಬಂದಾನವಾಜ ವಿವಿಯು ಶನಿವಾರ ಆಯೋಜಿಸಿದ್ದ ‘ಹಳೆಯ ವಿದ್ಯಾರ್ಥಿಗಳ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಬಿಎನ್ ವಿಶ್ವಾವಿದ್ಯಾಲಯವು ಕೆಲವೇ ವರ್ಷಗಳಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಹೆಸರನ್ನು ಪಡೆದಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿದೆ ಎಂದರು. ಅತಿ ಶೀಘ್ರದಲ್ಲೇ ವಿವಿಯು ಇನ್ನೂ ಅನೇಕ ಕಟ್ಟಡಗಳನ್ನೊಳಗೊಂಡು ಅತ್ಯುತ್ತಮ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ. ಸತತ ಪರಿಶ್ರಮ ಉನ್ನತ ಯಶಸ್ಸಿಗೆ ಎಡೆಮಾಡಿ ಕೊಡುತ್ತದೆ, ಆದ್ದರಿಂದ ವಿದ್ಯಾರ್ಥಿಗಳಿಗೆ ಕಲಿಕಾ ಜೀವನ ಅಮೂಲ್ಯವಾದುದ್ದು ಎಂದರು.

ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ನೂರ್ಜಹಾನ್ (ಅಧ್ಯಕ್ಷ) ಸಮೀನಾ ಬೇಗಂ (ಉಪಾಧ್ಯಕ್ಷ) ನೀಲಾ ಪರ್ವೀನ್ (ಕಾರ್ಯದರ್ಶಿ)
ಕಮ್ರಾನ್ ಜೆಸ್ಮೀಲ್ (ಖಜಾಂಚಿ)
ಹಾಗೂ ರಫೀಕ್, ಗೌಸಿಯಾ, ನಿದಾ ಅಂಜುಮ್, ಮದಿಹಾ ಹಫ್ಸಾ ಮರ್ಯಮ್ ಇವರನ್ನು (ಸದಸ್ಯರು)ಗಳನ್ನಾಗಿ ನೇಮಿಸಲಾಯಿತು.

ಹಳೆಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಕೆಬಿಎನ್ ವಿವಿಯ ಡೀನ್ ಡಾ. ನಿಶಾತ ಆರೀಫ್ ಹುಸೇನಿ ಪ್ರಮಾಣ ವಚನ ಭೋದಿಸಿದರು.

ಹಳೆಯ ವಿದ್ಯಾರ್ಥಿಗಳಾದ ಸಮೀನಾ, ಘೌಸಿಯಾ, ತಹಸೀನ್, ಹುಮೇರಾ ಬೇಗಂ, ಸಾರಾ ಶಹಕರ್
ಜವೇರಿಯಾ ಫರೋಕಿ, ಅಲಿಯ ತಹ್ಸೀನ್, ದರಾಕ್ಷನ್ ಅಹ್ಮರ್, ಜುಬೈರ್, ಶಾಕಿರ್ ಜಮಾಲ್, ಸೈಯದ್ ಶಾರುಖ್ ಮತ್ತು ರಫೀಕ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಹಫೀಜ್ ಮೊಹಮ್ಮದ್ ಅಫ್ರೋಜ್ ಪ್ರಾರ್ಥಿಸಿದರೆ, ವಿದ್ಯಾರ್ಥಿನಿ ನಿದಾ ಸ್ವಾಗತಿಸಿದರು. ಡಾ. ಅತಿಯಾ ಸುಲ್ತಾನ ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಇಕ್ರಾ ಸುಲ್ತಾನ ಮತ್ತು ಸಫುರಾ ಫಾತಿಮಾ ನಿರೂಪಿಸಿದರು. ಸುಮ್ಮಿಯ್ಯಾ ವಂದಿಸಿದರು.

ಇದೇ ವೇಳೆ ಎಲ್ಲ ಬ್ಯಾಚಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಫಿ ಮತ್ತು ಜೈವಿಕ ತಂತ್ರಜ್ಞಾನದ ಸಹಾಯಕ ಪ್ರಾಧ್ಯಾಪಕ ಡಾ ಮುಜೀಬ್ ಕೆಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದರು.

ಕೆಬಿಎನ್ ವಿವಿಯ ಕಲಾ, ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಎಲ್ಲ ಹಳೆಯ ಮತ್ತು ಪ್ರಸ್ತುತ ವಿದ್ಯಾರ್ಥಿಗಳು ಹಾಜರಿದ್ದರು.

ಅಲ್ಲದೆ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರನ್ನಾಗಿ ಡಾ. ನಿಶಾತ ಆರೀಫ್ ಹುಸೇನಿ, ಸಂಚಾಲಕ ಡಾ. ಜಹಾನಾರ, ಡಾ. ಅತಿಯಾ ಸುಲ್ತಾನ, ಡಾ. ಮುಜೀಬ್, ಡಾ. ಶೈಖ್ ತಬಸ್ಸುಮ್, ಡಾ. ಸನಾ ಇಜಾಜ್, ಡಾ. ವಿನೋದ್ ಪಾಟೀಲ್, ಡಾ. ತಿಲಕ ಗಸ್ತಿ, ಡಾ. ಮೈಮುನ ಸರಡಗಿ, ಡಾ. ಹೀನಾ, ಕುಡ್ಸಿಯ ಪರ್ವೀನ್ ಮತ್ತು ಮನಿಷಾ ಪಾಟೀಲ ರನ್ನು ಸದಸ್ಯರನ್ನಾಗಿ ನೇಮಿಸಲಾಯಿತು.