ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಸನ್ಮಾನ

ದಾವಣಗೆರೆ.ಜು.೨೫: ಸರಕಾರಿ ಬಾಲಕರ ಪ್ರೌಢಶಾಲೆಯ ಉಪನ್ಯಾಸಕರುಗಳಿಗೆ ಗುರು ಪೂರ್ಣಿಮೆಯ ಅಂಗವಾಗಿ ೧೯೯೮ ರಿಂದ ೨೦೦೧ರ ವರೆಗೆ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ ಈಚೆಗೆ ನಗರದ ಪಂಚಮಿ ಪರಿವಾರ್ ಹೊಟೇಲ್‌ನಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲ ಕೆ. ಶಿವಪ್ಪ, ಎ.ಡಿ. ಶಿವಪ್ಪ, ಎಮ್.ಎಸ್. ಬಕ್ಕೇಶ್, ಆರ್. ರಂಗಪ್ಪ, ಆರ್.ಎಸ್. ಜಗದೀಶ್, ಎಸ್. ವಾಣಿಶ್ರೀ ಉಪನ್ಯಾಸಕರುಗಳಿಗೆ ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಾದ ಎಸ್. ರಾಘವೇಂದ್ರ, ಹೆಚ್.ಜಿ. ಸನಾವುಲ್ಲಾ, ಕೆ.ಎಂ. ಪ್ರೇಮನಾಥಯ್ಯ, ಎಂ. ತಿಪ್ಪೇಸ್ವಾಮಿ, ಎನ್. ನಾಗೇಂದ್ರ, ಎಸ್.ಎ. ಬಸವರಾಜ್, ಶಂಶುದ್ದೀನ್, ಎಂ. ಮಹಾಂತೇಶ್ ನಾಯ್ಕ್, ಡಿ.ಕೆ. ಮಂಜುನಾಥ್ ರೆಡ್ಡಿ ಪಾಲ್ಗೊಂಡಿದ್ದರು.