ಹಳೆಯ ವಸ್ತು ನೀಡಿ ಉಡುಗೊರೆ ಪಡೆದುಕೊಳ್ಳಿ

ಸಿಂಧನೂರು,ಮೇ.೨೨-
ನಗರರಸಭೆ ವತಿಯಿಂದ ಮೇರಿ ಲೈಫ್ ಮೇರಾ ಸ್ವಚ್ಛ ಶಹರ್ (ನನ್ನ ಲೈಪ್ ನನ್ನ ಸ್ವಚ್ಛ ನಗರ) ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಹಳೆಯ ವಸ್ತುಗಳನ್ನು ನಗರಸಭೆಗೆ ನೀಡಿದರೆ ವಿಶೇಷ ಉಡುಗೊರೆಯ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ.
ಆದ್ದರಿಂದ ನಗರದ ನಾಗರೀಕರು ಹಳೆಯ ವಸ್ತುಗಳನ್ನು ನಗರ ಸಭೆಗೆ ನೀಡಿ ಉಡುಗೊರೆಯನ್ನು ಪಡೆದುಕೊಳ್ಳುವಂತೆ ನಗರ ಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡುರ್ ನಗರದ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾಡಳಿತ ರಾಯಚೂರುರವರ ನಿರ್ದೇಶನದಂತೆ ಸಿಂಧನೂರು ನಗರಸಭೆ ವತಿಯಿಂದ ದಿನಾಂಕ: ೨೦.೦೫.೨೦೨೩ರಿಂದ ದಿನಾಂಕ: ೦೫.೦೬.೨೦೨೩ರವರೆಗೆ ನನ್ನ ಲೈಪ್ ನನ್ನ ಸ್ವಚ್ಛ ನಗರ ಎಂಬ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ನಗರದ ನಾಗರಿಕರಲ್ಲಿ ತ್ಯಾಜ್ಯ ವಸ್ತುಗಳ ಪುನರ್ಬಳಕೆ ಮತ್ತು ಕ್ರಮಬದ್ಧವಾದ ತ್ಯಾಜ್ಯ ನಿರ್ವಹಣೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ.
ಖಖಖ ಎಂಬ ತ್ಯಾಜ್ಯ ನಿರ್ವಹಣೆಯ ಮೂರು ಅಂಶಗಳನ್ನು ಒಳಗೊಂಡಿರುತ್ತದೆ. ಖeಜuಛಿe: ಕಡಿಮೆಗೊಳಿಸುವುದು, ಖeuse: ಮರುಬಳಕೆ, ಖeಛಿಥಿಟe: ಪುನರ್‌ಬಳಕೆ ಎಂಬ ಖಖಖ ಸಿದ್ಧಾಂತದೊಂದಿಗೆ ನಮ್ಮ ದೈನಂದಿನ ಬದುಕಿನಲ್ಲಿ ಉತ್ಪತ್ತಿಯಾಗಿ ಪರಿಸರಕ್ಕೆ ಸೇರಿಕೊಳ್ಳುವ ತ್ಯಾಜ್ಯವಸ್ತುಗಳನ್ನು ಕಡಿಮೆಗೊಳಿಸುವುದು, ಮರುಬಳಕೆ ಮಾಡುವುದು ಮತ್ತು ಪುನರ್ಬಳಕೆ ಮಾಡುವುದರ ಬಗ್ಗೆ ಈ ಆಂದೋಲನ ಸಾರ್ವಜನಿಕರಲ್ಲಿ ಬೆಳಕು ಚೆಲ್ಲುತ್ತದೆ.
ನಗರದ ಇಂದಿರಾ ಕ್ಯಾಂಟಿನ್ ಆವರಣ, ನಗರಸಭೆ ಕಚೇರಿ ಆವರಣ,
ಇಂದಿರಾ ಪ್ರಿಯದರ್ಶಿನಿ ಶಾಲೆ, ಶಿವಜ್ಯೋತಿ ನಗರದ ಹತ್ತಿರದ ಆWಅ ಲಕ್ಷ್ಮೀ ಕ್ಯಾಂಪ್ ನ ಆWಅ ದಲ್ಲಿ
ಈ ಖಖಖ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಆಟಿಕೆಯ ವಸ್ತುಗಳು, ಮರುಬಳಕೆ ಮಾಡಬಹುದಾದ ಹಳೆಯ ಬಟ್ಟೆಗಳು, ದಿನಪತ್ರಿಕೆ, ಮಾಸ ಪತ್ರಿಕೆ, ಹಳೆಯ ಪುಸ್ತಕಗಳು, ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಕೈಚೀಲಗಳು, ಎಲೆಕ್ಟ್ರಾನಿಕ್ ಸಾಮಗ್ರಿಗಳು. ಒಳಗೊಂಡಂತೆ ವಿವಿಧ ಬಗೆಯ ಹಳೆಯ ವಸ್ತುಗಳನ್ನು ಈ ಖಖಖ ಕೇಂದ್ರಗಳಲ್ಲಿ ಸ್ವೀಕರಿಸಲಾಗುತ್ತದೆ.
ಇಂತಹ ಹಳೆಯ ವಸ್ತುಗಳನ್ನು ಸ್ವಯಂ ಪ್ರೇರಣೆಯಿಂದ ಖಖಖ ಕೇಂದ್ರಗಳಲ್ಲಿ ನೀಡುವ ನಾಗರಿಕರನ್ನು ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕ, ಪರಿಸರ ಸ್ನೇಹಿ ಪೆನ್, ಸಾವಯವ ಗೊಬ್ಬರ, ಬಟ್ಟೆಯ ಚೀಲ, ಹೂವಿನ ಗಿಡ, ಡಿಜಿಟಲ್ ಪ್ರಮಾಣ ಪತ್ರಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.
ವಿಶ್ವ ಪರಿಸರ ದಿನಾಚರಣೆಯ ಶುಭ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿರುವ ಈ ವಿಶೇಷ ಅಭಿಯಾನದಲ್ಲಿ ವಿದ್ಯಾರ್ಥಿಗಳು, ಯುವಕರು, ಜನ ಪ್ರತಿನಿಧಿಗಳು, ವರ್ತಕರು, ಮಹಿಳೆಯರು, ಮಕ್ಕಳು, ಸಂಘ ಸಂಸ್ಥೆಗಳ ಮುಖಂಡರು ಒಳಗೊಂಡಂತೆ ನಾಗರಿಕರು ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ತಮ್ಮ ಹಳೆಯ ನಿರುಪಯುಕ್ತ ವಸ್ತುಗಳನ್ನು ನೀಡಿ ನಗರಸಭೆಯಿಂದ ನೀಡಲಾಗುವ ಈ ಉಡುಗೊರೆಗಳನ್ನು ತಮ್ಮದಾಗಿಸಿಕೊಳ್ಳುವಂತೆ ನಗರಸಭೆ ಪೌರಾಯುಕ್ತ ರಾದ ಮಂಜುನಾಥ ಗುಂಡೂರ್ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಖಖ೪ಐiಈಇ,#ಅhooseಐiಈಇ,#Iಟಿಜiಚಿಗಿsಉಚಿಡಿbಚಿge, #ಏಚಿಡಿಟಿಚಿಣಚಿಞಚಿಓಚಿಟಿಟಿಚಿಐiಈಇಓಚಿಟಿಟಿಚಿSತಿಚಿಛಿhhಓಚಿgಚಿಡಿಚಿ ಎಂಬ ಹ್ಯಾಷ್ ಟ್ಯಾಗ್ ಗಳನ್ನು ಬಳಸಿ ಈ ವಿಶೇಷ ಪರಿಸರ ಸ್ನೇಹಿ ಆಂದೋಲನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಸುವಂತೆ ಅವರು ಕೋರಿದ್ದಾರೆ.