ಹಳೆಯ ಪಾಸ್ ಹಾಗೂ ರಸೀದಿ ತೋರಿಸಿ ಸಂಸ್ಥೆಯವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ

ಕಲಬುರಗಿ.ಸೆ.8:ಪ್ರಸ್ತುತ ಕೊನೆಯ/ಅಂತಿಮ ವರ್ಷದ ಸೆಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇನ್ನೂ ಮುಗಿಯದಿರುವುದನ್ನು ಗಮನಿಸಿ ವಿದ್ಯಾರ್ಥಿಗಳ ಬೇಡಿಕೆ ಹಾಗೂ ವೇಳಾಪಟ್ಟಿಯನ್ನು ಪರಿಗಣಿಸಿ ಅಂತಿಮ ಪರೀಕ್ಷೆ ಮುಗಿಯುವರೆಗೆ (ಅಂದರೆ ಅಕ್ಟೋಬರ್-2022ರ ಅಂತ್ಯದವರೆಗೆ) ಹಳೆಯ ಪಾಸ್‍ನ್ನು ಹಾಗೂ ಅವಧಿ ವಿಸ್ತರಣೆ ಸಮಯದಲ್ಲಿ ನೀಡಿರುವ ರಸೀದಿಯನ್ನು ತೋರಿಸಿ ಸಂಸ್ಥೆಯ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದು ಎಂದು ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

2022ರ ಅಗಸ್ಟ್‍ರವರೆಗೆ ನವೀಕರಿಸಲಾಗಿದ್ದ ಅಂತಿಮ ವರ್ಷದ ಕೊನೆಯ ಸೆಮಿಸ್ಟರ್‍ನಲ್ಲಿ ಅಭ್ಯಸಿಸುತ್ತಿರುವ ಪದವಿ, ಸ್ನಾತಕೋತ್ತರ, ಡಿಪ್ಲೋಮಾ, ಕಾನೂನು ಹಾಗೂ ಇತರೆ ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಪಾಸ್‍ಗಳನ್ನು ಮಾತ್ರ ಅಂತಿಮ ಪರೀಕ್ಷೆ ಮುಗಿಯುವರೆಗೆ ಅಂದರೆ ಅಕ್ಟೋಬರ್-2022ರ ಅಂತ್ಯದವರೆಗೆ ಹಳೆಯ ಪಾಸ್‍ನ್ನು ಹಾಗೂ ಅವಧಿ ವಿಸ್ತರಣೆ ಸಮಯದಲ್ಲಿ ನೀಡಿರುವ ರಸೀದಿಯನ್ನು ತೋರಿಸಿ ಸಂಸ್ಥೆಯ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.

     ಇನ್ನುಳಿದ ಇನ್ನಿತರ ತರಗತಿ/ಇತರೆ ಸೆಮಿಸ್ಟರ್ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಿ ಹೊಸ ಬಸ್‍ಪಾಸ್‍ಗಳನ್ನು ಪಡೆಯಬಹುದಾಗಿದ್ದು. ಪಾಸ್ ವಿತರಣಾ ಪ್ರಕ್ರಿಯೆಯನ್ನು ಮುಂದುವರೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.