ಹಳೆಯ ಗೂಡ್ಸ್ ಯಾರ್ಡನಲ್ಲಿ ಪೀಟ್ ಲೈನನ್ನು ಪ್ರಾರಂಭಿಸಲು ಸಂಸದ ರಮೇಶ ಜಿಗಜಿಣಗಿ ಒತ್ತಾಯ

ವಿಜಯಪುರ, ಅ.3-ವಿಜಯಪುರ ರೈಲು ನಿಲ್ದಾಣದಲ್ಲಿ ಹಳೆಯ ಗೂಡ್ಸ್‍ಯಾರ್ಡ ಬಹಳ ಇಕ್ಕಟ್ಟನಿಂದ ಹಾಗು ಸುತ್ತಮುತ್ತಲಿನ ಜನತೆಗೆ, ರೈಲು ಸಂಚಾರಕ್ಕೆ ಬಹಳೇ ಅಡಚಣೆಯಾಗಿತ್ತು ಹೀಗಾಗಿ ಅದನ್ನು ಅಲಿಯಾಬಾದಗೆ ಸ್ಥಳಾಂತರಿಸಲಾಯಿತು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಅವರು ನಗರದ ಅಲಿಯಾಬಾದನಲ್ಲಿ 23 ಕೋಟಿ ವೆಚ್ಚದಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ಬಹುದಿನದ ಬೇಡಿಕೆಯಾಗಿದ್ದ ನೂತನ ಗೂಡ್ಸ್‍ಶೆಡ್‍ನ್ನು ಉದ್ಘಾಟಿಸಿ ಮಾತಾನಾಡುತ್ತಾ ಕೆಲವೊಂದು ಬೇಡಿಕೆಗಳಾದ ವಿಜಯಪುರ-ತಿರುಪತಿ, ವಾರಕ್ಕೊಮ್ಮೆ ಓಡುತ್ತಿರುವ ದೆಹಲಿ ರೈಲನ್ನು ವಾರದಲ್ಲಿ 3 ದಿನ ಓಡಿಸಲು, ಗೋಲಗುಮ್ಮಟ ಎಠಿÀ್ಷಪ್ರೇಸ್ ರೈಲನ್ನು ಗದಗ ಹಾಗೂ ಹುಬ್ಬಳ್ಳಿ ಬೈಪಾಸದಲ್ಲಿ ಓಡಿಸಿ ಬೆಂಗಳೂರಿಗೆ ಬೇಗನೆ ತಲುಪಲು ಸಹಾಯವಾಗುತ್ತದೆ, ಹಳೆಯ ಗೂಡ್ಸ್ ಯಾರ್ಡನಲ್ಲಿ ಪೀಟ್ ಲೈನನ್ನು ಪ್ರಾರಂಭಿಸಬೇಕು ನಗರದ ಇಬ್ರಾಹಿಮಪೂರದ ಮನಗೂಳಿ ರೋಡನಲ್ಲಿ ಅಂಡರಪಾಸ ಮತ್ತು ಕೆ.ಐ.ಡಿ.ಬಿ. ರೇಲ್ವೆ ಕ್ರಾಸನಲ್ಲಿ ಪ್ಲಾಯ ಓವ್ಹರ ಬ್ರಿಡ್ಜನ್ನು ಬೇಗನೆ ಪ್ರಾರಂಬಿಸಬೇಕು ಎಂದು ಒತ್ತಾಯಿಸಿದರು.

ಮುಂಬಯಿ-ಹೊಸಪೇಟ ರೈಲಿಗೆ ಸ್ಲೀಫರ ಕೋಚನ್ನು ಇನ್ನು ಹೆಚ್ಚಿಸಬೇಕು ಮುಂಬಯಿ-ಸೋಲಾಪುರ ವಂದೇ ಭಾರತ ರೈಲನ್ನು ವಿಜಯಪುರದವರೆಗೆ ವಿಸ್ತರಿಸಲು ಮನವಿ ಮಾಡಿಕೊಂಡರು ಕಾರ್ಯದರ್ಶಿ ಈರಣ್ಣ ಅಳ್ಳಗಿಯವರು ವಿಜಯಪುರ-ಗದಗ ಮಾರ್ಗದಲ್ಲಿ ಕೆಲವು ಸ್ಥಳಗಳಲ್ಲಿ ಜೋಡಿ ಮಾರ್ಗವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ಈ ಮಾರ್ಗದಲ್ಲಿ ಎಲ್ಲ ರೈಲುಗಳನ್ನು ವೇಗ ಹೆಚ್ಚಿಸಲು ಹಾಗೂ ಹೊಸದಾಗಿ ವಿಜಯಪುರ-ಬೆಂಗಳೂರ ವಂದೇ ಭಾರತ ರೈಲನ್ನು ಓಡಿಸಲು ರೇಲ್ವೆ ಇಲಾಖೆಯ ಹಿರಿಯ ವಾಣಿಜ್ಯ ವ್ಯವಸ್ಥಾಪಕರಾದ ಸಂತೋಷ ಹೆಗಡೆ ಮತ್ತು ಸಂಸದರಿಗೆ ಆಗ್ರಹಿಸಿದರು

ರೈಲು ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಸತೀಶ ವಿಶ್ವನಾಥ ಭಾವಿ ಹಾಗೂ ಸಮಿತಿಯವರು ಸಂಸದರನ್ನು ಸನ್ಮಾನಿಸಿದರು

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಅಶೋಕ ಹಳ್ಳೂರ, ಮರ್ಚಂಟ್ಸ ಅಶೋಸಿಯೇಸನದ ಪದಾಧಿಕಾರಿಗಳಾದ ರವೀಂದ್ರ ಬಿಜ್ಜರಗಿ, ನಿಲೇಶ ಶಹಾ, ಪ್ರವೀಣ ವಾರದ, ಮನೋಜ ಬಗಲಿ, ಸಾಗರ ಮೊಗಲಿ, ಭಾವೇಶ ಪೋರವಾಲ ಮತ್ತಿತರು ಉಪಸ್ಥಿತರಿದ್ದರು.