ಹಳೆಮಲಪನಗುಡಿ ಗ್ರಾಮದ ಯುವತಿ ಕಾಣೆ: ಪತ್ತೆಗೆ ಮನವಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ7: ಪ್ರತಿದಿನ ಹೊಸಪೇಟೆಯಲ್ಲಿ ಬೇಲ್ದಾರಗಳ ಹಿಂದೆ ಲೇಬರ್ ಕೆಲಸಕ್ಕೆ ಹೋಗುತ್ತಿದ್ದ ಹೊಸಪೇಟೆ ತಾಲೂಕಿನ ಹಳೆಮಲಪನಗುಡಿ ಗ್ರಾಮದ ಹರಿಜನ ಕೇರಿಯ 1ನೇ ವಾರ್ಡ್‍ನ ಮಹಿಳೆ ಹೆಚ್ ಸಣ್ಣತಿಪ್ಪಮ್ಮ ಕಾಣೆಯಾದ ಬಗ್ಗೆ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರೀಲ್ 30ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದ ತಮ್ಮ ಮಗಳು ಹೆಚ್.ಸಣ್ಣತಿಪ್ಪಮ್ಮ  ಎಲ್ಲಿಗೋ ಹೋಗಿರುತ್ತಾಳೆ. ಎಷ್ಟು ಹುಡುಕಿದರು ಪತ್ತೆಯಾಗಿರುವುದಿಲ್ಲ. ತನ್ನ ಮಗಳು ಕಾಣೆಯಾದ ದಿನದಿಂದ ತನ್ನ ಮಗಳೊಂದಿಗೆ ಪ್ರೀತಿ ಮಾಡುತ್ತಿದ್ದ ಕಮಲಾಪುರದ ತಮ್ಮದೇ ಜನಾಂಗದ ಬೇಲ್ದಾರ ಕೆಲಸ ಮಾಡುವ ಹುಡುಗನು ಸಹ ಕಾಣುತ್ತಿಲ್ಲ, ಆತನ ಪೆÇೀನ್ ಸ್ವಿಚ್‍ಆಪ್ ಆಗಿರುತ್ತದೆ.  ಯಾರಿಗೂ ಹೇಳದೆ, ಕೇಳದೆ ಎಲ್ಲಿಗೋ ಹೋಗಿ ಕಾಣೆಯಾದ ತಮ್ಮ ಮಗಳನ್ನು  ಪತ್ತೆ ಮಾಡಿಕೊಡಬೇಕೆಂದು ಹರಿಜನ ರಾಟಿ ತಾಯಪ್ಪ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
24 ವಯಸ್ಸಿನ ಹೆಚ್.ಸಣ್ಣತಿಪ್ಪಮ್ಮ 4.5 ಅಡಿ ಎತ್ತರವಿದ್ದು, ಕಪ್ಪು ಮೈಬಣ್ಣ, ಸಾಧಾರಣಾ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಉದ್ದನೆಯ ಕಪ್ಪು ಕೂದಲು ಹೊಂದಿದ್ದಾಳೆ. ಬಿಳಿಬಣ್ಣದ ಪ್ಯಾಂಟ್ ಧರಿಸಿದ್ದಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ.
ಈ ಚಹರೆ ಪಟ್ಟಿಯಲ್ಲಿರುವ ಮಹಿಳೆ ಎಲ್ಲಿಯಾದರೂ ಕಂಡುಬಂದಲ್ಲಿ, ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಹೊಸಪೇಟೆ ಗ್ರಾಮೀಣ ಪೆÇಲೀಸ್ ಠಾಣೆಗೆ ಮಾಹಿತಿ ನೀಡಲು ಮತ್ತು ಹೊಸಪೇಟೆ ಕಂಟ್ರೋಲ್ ರೂಮ್ ದೂರವಾಣಿ: 9480805700, ಹೊಸಪೇಟೆ ಗ್ರಾಮೀಣ ಪೆÇಲೀಸ್ ಠಾಣೆ ದೂರವಾಣಿ 228233 (08394) ಅಥವಾ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮೊ: 9480805746. ಅವರಿಗೆ ಮಾಹಿತಿ ನೀಡಬೇಕು ಎಂದು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

One attachment • Scanned by Gmail