ಹಳೆಬೀಡು: ಪುಷ್ಪಗಿರಿ ಮಹಾ ಸಂಸ್ಥಾನ ಶ್ರೀಗಳಿಂದ ಸಂಜೆವಾಣಿ ಕ್ಯಾಲೆಂಡರ್ ಸ್ವೀಕಾರ

ಬೀದರ್, ಜ 9:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಆಶೋಕಕುಮಾರ ಕರಂಜಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಅವರು ಇಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡಿನ ಪುಷ್ಪಗಿರಿ ಮಹಾಸಂಸ್ಥಾನದ ಪುಷ್ಪಗಿರಿ ಕಲಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಹಾಗೂ 89ನೇ ರಾಜ್ಯ ಮಟ್ಟದ ಸಾಮಾನ್ಯ ಮಹಾ ಸಭೆಯಲ್ಲಿ ಭಾಗವಹಿಸಿದರು.
ಇದೇ ವೇಳೆ ಅಲ್ಲಿಯ ಪುಷ್ಪಗಿರಿ ಮಹಾ ಸಂಸ್ಥಾನದ ಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳನೇತೃತ್ವದಲ್ಲಿ ನಾಡಿನ ಹೆಮ್ಮೆಯ ಹಾಗೂ ಸಮೃದ್ಧಿ ದಿನಪತ್ರಿಕೆಯಾದ ಸಂಜೆವಾಣಿ ದಿನ ಪತ್ರಿಕೆ ಈ ವರ್ಷ ಹೊರತಂದ ಪಂಚಾಂಗಯುಕ್ತ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು. ನಂತರ ಸಂಜೆವಾಣಿ ಪತ್ರಿಕೆಯ ಉಪ ಸಂಪಾದಕರು ಹಾಗೂ ಕಕಾಪಸಂ ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಪೂಜ್ಯರಿಗೆ ಕ್ಯಾಲೆಂಡರ್ ನೀಡಿ ಆಶೀರ್ವಾದ ಪಡೆದರು.