ಹಳೆಗನ್ನಡ ಸಾಹಿತ್ಯವನ್ನು ಯುವ ಪೀಳಿಗೆಗೆ ತಿಳಿಸಿ ಸಾಹಿತ್ಯವನ್ನು ಬೆಳೆಸಬೇಕು – ಕುಂ.ವೀರಭದ್ರಪ್ಪ

ರಾಯಚೂರು,ನ.೧೪- ಮರುಸೃಷ್ಠಿ ಅನುವಾದಿಸುವ ಗುಣಗಳಿರುವ ಕವಿಗಳಿಂದ ಉತ್ತಮ ಕವನ ರಚಿಸಲು ಸಾಧ್ಯ ಎಂದ ಅವರು,ಕವನ ಬರೆಯವುದು ಸವಾಲಿನ ಕೆಲಸ ಎಂದು ಸಾಹಿತಿ,ಚಿಂತಕ ಕುಂ.ವೀರಭದ್ರಪ್ಪ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಚಿದಾನಂದ ಕ್ಯಾನ್ಸರ್ ಕೇರ್ ಫೌಂಡೇಶನ್ ವತಿಯಿಂದ ನಗರದ ಐಎಂಎ ಸಭಾಂಗಣದಲ್ಲಿ ನಡೆದ ಡಾ.ರಮೇಶ್ ಪಿ ಸಾಗರ್ ಅವರ ಕೇಜಿಗಟ್ಟಲೆ ತೂಕದ ಪುಸ್ತಕಗಳ ಮಧ್ಯೆ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು,ಹಳೆಗನ್ನಡವೂ ಕನ್ನಡ ಸಾಹಿತ್ಯದ ಶಕ್ತಿ.ಪಂಪ,ರನ್ನ,ಪೊನ್ನ ಅವರ ಹಳೆಗನ್ನಡ ಸಾಹಿತ್ಯವನ್ನು ಸಂಗೀತಕ್ಕೆ ಅಳವಡಿಸಿ ಯುವ ಪೀಳಿಗೆಗೆ ತಿಳಿಸಿ ಸಾಹಿತ್ಯವನ್ನು ಬೆಳೆಸಬೇಕು
ಸರ್ಕಾರ ತಿಪ್ಪೆ ಸವಾರುವ ಕೆಲಸ ಮಾಡುತ್ತಿದ್ದು ಸಾಹಿತ್ಯವನ್ನು ಬೆಳೆಸುವ ಕೆಲಸ ಮಾಡುತ್ತಿಲ್ಲ.ಹಳೆಗನ್ನಡ,ಜಾನಪದ, ಲಲಿತಾಕಲೆ ಉಳಿಸಬೇಕು.ಸಮಾಜವನ್ನು ನೋಡುವ ಜಾಣ್ಮೆ ಸಾಹಿತಿಗಳಿಗೆ ಇರಬೇಕು. ಕಲ್ಪನಾಶಕ್ತಿ,ಸಾಹಿತಿಗಳು ಸ್ಥಳೀಯ ಪರಿಸ್ಥಿತಿ ಅರಿತು ಭಿನ್ನವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.ವೃತ್ತಿಯ ಒತ್ತಡಗಳ ಮಧ್ಯೆ ಉತ್ತಮ ಕವನ ಸಂಕಲನ ರಚನೆ ಮಾಡಿದ ಡಾ.ರಮೇಶ ಪಿ ಸಾಗರ್ ಕೇವಲ ಒಂದೇ ಕೃತಿಗೆ ಸೀಮಿತರಾಗದೇ ಸಾಹಿತ್ಯ ಕೃಷಿ ಮುಂದುವರೆಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯಕ್ಕೆ ವಿಶಾಲವಾದ ಪರಂಪರೆಯಿದ್ದು, ಪರಧರ್ಮ ಸಹಿಷ್ಣುತೆ, ಇನ್ನೊಬ್ಬರ ವಿಚಾರಗಳಿಗೆ ಗೌರವಿಸುವುದನ್ನು ಇತಿಹಾಸದಿಂದ ತಿಳಿಯಬಹುದು. ಕನ್ನಡಿಗರು ಭಾವನಾತ್ಮಕ ಸಂಬಂಧಗಳನ್ನು ನಿಭಾಯಿಸಲು ಮುಂದೆ ಇದ್ದಾರೆ. ಕನ್ನಡವನ್ನು ಉಳಿಸಿ ಬೆಳೆಸಲು ಎಲ್ಲರು ಜವಾಬ್ದಾರಿ ಹೊರಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ, ಐಎಂಎ ಅಧ್ಯಕ್ಷ ಡಾ.ಪ್ರಭುರಾಜ ಗದ್ದಿಕೇರಿ, ಡಾ.ರಾಮಪ್ಪ, ಸಾಹಿತಿ ಮಹಂತೇಶ ಮಸ್ಕಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ದಂಡಪ್ಪ ಬಿರಾದಾರ್ ಇದ್ದರು. ಸಾಹಿತಿ ಈರಣ್ಣ ಬೆಂಗಾಲಿ ಸ್ವಾಗತಿಸಿದರು. ವಿಜಯರಾಜೇಂದ್ರ ನಿರೂಪಿಸಿದರು.