ಹಳೆಂಬರದಲ್ಲಿ ವೈಭವದ ವೀರಭದ್ರಪ್ಪನವರ ಪಲ್ಲಕ್ಕಿ ಉತ್ಸವ

ಬೀದರ, ಏ. 15: ಇಲ್ಲಿಗೆ ಸಮೀಪದ ಅಲಿಯಂಬರ (ಹಳೆಂಬರ) ಗ್ರಾಮದಲ್ಲಿ ಶರಣ ವೀರಭದ್ರಪ್ಪನವರ 76ನೇ ಪುಣ್ಯತಿಥಿ ನಿಮಿತ್ತ ನಡೆದ ಜಾತ್ರಾ ಮಹೋತ್ಸವದಲ್ಲಿ ದಿ. 12 ರಂದು ಬುಧವಾರ ಸಂಜೆ 4 ಗಂಟೆಗೆ ಧೂನಿ ಪೂಜೆ ನಂತರ ಸಾವಿರಾರು ಭಕ್ತಾದಿಗಳು ಮಹಾಪ್ರಸಾದ ಸ್ವೀಕರಿಸಿದರು. ಅಂದು ಮಧ್ಯರಾತ್ರಿಯಿಂದ ಗ್ರಾಮದಲ್ಲಿ ಸಾರೋಟದಲ್ಲಿ ಪೂಜ್ಯ ವೀರಭದ್ರಪ್ಪನವರ ಭಾವಚಿತ್ರದ ಮೆರವಣಿಗೆ ಹಾಗೂ ವೈಭವದ ಪಲ್ಲಕ್ಕಿ ಉತ್ಸವ ನಡೆಯಿತು.

ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ಯುವಕರು ಸೇರಿ ಭಕ್ತರು ಡಿಜೆ. ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು.

ಏಪ್ರೀಲ್ 13 ರಂದು ಬೆಳಗ್ಗೆ 8 ಗಂಟೆಯಿಂದ ಜಂಗಿ ಕುಸ್ತಿಗಳು ನಡೆದವು. ಕೊನೆ ಕುಸ್ತಿಯಲ್ಲಿ ವಿಜೇತರಿಗೆ ಬೆಳ್ಳಿ ಕಡಗ ನೀಡಿ, ಗೌರವಿಸಲಾಯಿತು. ರಾತ್ರಿ 8 ಗಂಟೆಯಿಂದ ಮಂದಿರದ ಆವರಣದಲ್ಲಿ ಸಂಗೀತ ದರ್ಬಾರ ಕಾರ್ಯಕ್ರಮ ನಡೆಯಿತು ಎಂದು ದೇವಸ್ಥಾನದ ಸದ್ಭಕ್ತ ಮಂಡಳಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.