ಹಳೆಂಬರದಲ್ಲಿ ವೀರಭದ್ರಪ್ಪನವರ 76 ಜಾತ್ರಾ ಮಹೋತ್ಸವ 12 ಕ್ಕೆ

ಬೀದರ, ಏ. 10: ಏಪ್ರೀಲ್ 6 ರಿಂದ 12ರ ವರೆಗೆ ಇಲ್ಲಿಗೆ ಸಮೀಪದ ಅಲಿಯಂಬರ (ಹಳೆಂಬರ) ಗ್ರಾಮದಲ್ಲಿ ಶರಣ ವೀರಭದ್ರಪ್ಪನವರ 75ನೇ ಪುಣ್ಯತಿಥಿ ನಿಮಿತ್ತ ಜಾತ್ರಾ ಮಹೋತ್ಸವ ನಡೆಯಲಿದೆ.

ಶ್ರೀ ಮುನಿರಂಜನ ಪುಣ್ಯಸ್ವರೂಪಿಗಳು, ನಿರಂಜನರು, ತ್ರಿಕಾಲ ಜ್ಞಾನಿಗಳು, ಸರ್ವಧರ್ಮ ಹಿತೈಷಿಗಳು, ಪ್ರಾಣಪ್ರತಿಷ್ಠಾನ ಪುರುಷರು, ದತ್ತಾನಂದರು, ದಾಸೋಹಿಗಳು, ಭಜನಾಂದರು, ಸಪ್ತಾಹಗಳು ನಡೆಸುವ ಶಾಂತಿಯ ದೂತರು, ಜೀತಪ್ಪ ಮತ್ತು ಜ್ಞಾನಮ್ಮನವರ ಕಣ್ಮಣಿಗಳಾದ ಪೂಜ್ಯ ಶ್ರೀ ಶರಣ ವೀರಭದ್ರಪ್ಪನವರ 76 ನೇ ಪುಣ್ಯತಿಥಿ ನಿಮಿತ್ತ ಪುಣ್ಯಕ್ಷೇತ್ರ ಹಳೆಂಬರದ ಶ್ರೀ ವೀರಭದ್ರಪ್ಪನವರ ದೇವಸ್ಥಾನದಲ್ಲಿ ಏಪ್ರೀಲ್ 06 ರಿಂದ ಸಪ್ತಾಹ ಪ್ರಾರಂಭವಾಗಿದೆ. ದಿ. 12 ರಂದು ಬುಧವಾರ ಸಂಜೆ 4 ಗಂಟೆಗೆ ಧೂನಿ ಪೂಜೆ ನಡೆಯಲಿದೆ. ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಿಸಲಾಗುವುದು. ಅಂದು ಮಧ್ಯರಾತ್ರಿ 1 ಗಂಟೆಯಿಂದ ಪೂಜ್ಯ ವೀರಭದ್ರಪ್ಪನವರ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಪ್ರತಿ ವರ್ಷದಂತೆ ಈ ವರ್ಷವೂ ವೈಭವದಿಂದ ನಡಯಲಿದೆ.

ಗಂಗಾಧರ ಮಠದ ಪೂಜ್ಯ ಶ್ರೀ ಡಾ. ನಾಗಭೂಷಣ ಶಿವಚಾರ್ಯರ ದಿವ್ಯ ಸಾನ್ನಿಧ್ಯ, ಔರಾದ ತಾಲೂಕಿನ ಹೆಡಗಾಪೂರ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಷ.ಬ್ರ. ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು, ಬೀದರ ತಾಲೂಕಿನ ಚಾಂಬೋಳ ಮಠದದ ಪೂಜ್ಯ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿ, ಪೂಜ್ಯ ಶ್ರೀ ವೈಜಿನಾಥ ಸ್ವಾಮಿ ಗಾದಗಿ, ಹಾಗು ಶಿವಣಿ ಮತ್ತು ಹಲಬರ್ಗಾದ ಪೂಜ್ಯ ಹಾವಗಿಲಿಂಗ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಪ್ರತಿನಿತ್ಯ ಭಜನೆ ಮತ್ತು ಆಶೀರ್ವಚನ ಕಾರ್ಯಕ್ರಮಗಳು ನಡೆಯಲಿವೆ.

ದಿ. 12 ರಂದು ಬೆಳಗ್ಗೆ 8 ಗಂಟೆಗೆ ಗಂಗಾಧರ ಮಠದಿಂದ ಗಂಗಾಪೂಜೆ ಮಾಡಿ 108 ತುಂಬಿದ ಕಳಸದೊಂದಿಗೆ ಮಹಿಳೆಯರು ಮಂದಿರಕ್ಕೆ ಆಗಮಿಸುವರು. ನಂತರ ಗದ್ದುಗೆಗೆ ಔರಾದ ತಾಲೂಕಿನ ವಡಗಾಂವÀ ರುದ್ರ ಸಂಘದಿಂದ ಮಹಾರುದ್ರಾಭಿಷೇಕ ನಡೆಯುವುದು. ಸಂಜೆ 4 ಗಂಟೆಗೆ ಧೂನಿ ಪೂಜೆ ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ಮಾಡಲಾಗುವುದು. ರಾತ್ರಿ ಹರಗುರು ಚರಮೂರ್ತಿಗಳಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ. ತದನಂತರ ರಾತ್ರಿ 10 ರಿಂದ ವಿವಿಧ ಕಲಾವಿದರ ತಂಡದಿಂದ ಭಜನೆ ನಡೆಯಲಿದೆ. ಮಧ್ಯರಾತ್ರಿ ಶರಣ ವೀರಭದ್ರಪ್ಪನವರ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.

ಏಪ್ರೀಲ್ 13 ರಂದು ಬೆಳಗ್ಗೆ 8 ಗಂಟೆಯಿಂದ ಜಂಗಿ ಕುಸ್ತಿಗಳು ನಡೆಯಲಿದ್ದು, ಕೊನೆ ಕುಸ್ತಿಯಲ್ಲಿ ವಿಜೇತರಿಗೆ ಬೆಳ್ಳಿ ಕಡಗ ನೀಡಿ, ಗೌರವಿಸಲಾಗುವುದು.

ಏಪ್ರೀಲ್ 13 ರಂದು ರಾತ್ರಿ 8 ಗಂಟೆಯಿಂದ ಮಂದಿರದ ಆವರಣದಲ್ಲಿ ಸಂಗೀತ ದರ್ಬಾರ ಕಾರ್ಯಕ್ರಮ ನಡೆಯಲಿದೆ.

ಶರಣ ಹಳೆಂಬರ ವೀರಭದ್ರಪ್ಪನವರ 76 ನೇ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ವೀರಭದ್ರಪ್ಪನವರ ಗದ್ದುಗೆ ಹಾಗೂ ಮೂರ್ತಿ ದರ್ಶನ ಪಡೆದು, ಮಹಾಪ್ರಸಾದ ಸ್ವೀಕರಿಸಿ ಪುನಿತರಾಗಬೇಕು ಎಂದು ದೇವಸ್ಥಾನದ ಸದ್ಭಕ್ತ ಮಂಡಳಿ ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದೆ.