ಹಳಿ ತಪ್ಪಿದ ರೈಲು ಪ್ರಯಾಣಿಕರು ಪಾರು

ಬೆಂಗಳೂರು, ನ.೧೨- ಕಣ್ಣೂರು ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಬೆಳ್ಳಂಬೆಳಗ್ಗೆ ಹಳಿ ತಪ್ಪಿದ ಘಟನೆ ನಡೆದಿದ್ದು ರೈಲಿನಲ್ಲಿದ್ದ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ
ರೈಲಿನ ಹಳಿಗಳ ಮೇಲೆ ಬಂಡೆಕಲ್ಲು ಉರುಳಿಬಿದ್ದ ಪರಿಣಾಮ ರೈಲು ಹಳಿ ತಪ್ಪುವಂತಾಗಿ ಈ ಘಟನೆ ನಡೆದಿದೆ. ಇಂದು ಮುಂಜಾನೆ ೩.೫೦ ರ ಸುಮಾರಿನಲ್ಲಿ ಬೆಂಗಳೂರು ವಿಭಾಗದ ಪೊಪ್ಪೂರು -ಶಿವಡಿ ನಡುವೆ ರೈಲು ಹಳಿಗಳ ಮೇಲೆ ಬಂಡೆ ಕಲ್ಲು ಬಿದ್ದ ಹಿನ್ನಲೆಯಲ್ಲಿ ಬೆಂಗಳೂರು ಕಣ್ಣೂರು ಮಾರ್ಗದ ರೈಲಿನ ೭ ಬೋಗಿಗಳು ಹಳಿತಪ್ಪಿವೆ.


ರೈಲಿನಲ್ಲಿ ೨೩೪೮ ಪ್ರಯಾಣಿಕರಿದ್ದು ಹಳಿತಪ್ಪಿದ ಬೋಗಿಗಳು ಸೇರಿದಂತೆ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ನೈರುತ್ಯ ರೈಲ್ವೆ ಹಿರಿಯ ಅಧಿಕಾರಿಗಳು ಈ ವಿಷಯ ಖಚಿತ ಪಡಿಸಿದ್ದಾರೆ. ರೈಲಿನ ಬೋಗಿಗಳು ಹಳಿತಪ್ಪಿದ ಹಿನ್ನೆಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕ ಎದುರಾಗಿತ್ತು. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಸಂಖ್ಯೆ ೦೭೩೯೦ರ ಮೇಲೆ ಬಂಡೆಗಳು ಉರುಳಿದ ಕಾರಣ ಹೇಳು ಬೋಗಿಗಳು ಹಳಿ ತಪ್ಪಿವೆ ಬೆಂಗಳೂರು ವಿಭಾಗ ರೈಲ್ವೆ ಸ್ಥಾಪಕರು ವೈದ್ಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಏರುತ್ತಿರುವ ತಿಳಿಸಿದೆ.
ಬೆಂಗಳೂರು ರೈಲ್ವೆ ವಿಭಾಗದ ವಿಭಾಗೀಯ ವ್ಯವಸ್ಥಾಪಕ ನಿರ್ದೇಶಕ ಸಾಮ್ಸಂಗ್ ಮತ್ತು ವಿಭಾಗಿಯ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ.
ಹಳಿತಪ್ಪಿದ ಆರೋಪಿಗಳನ್ನು ಬಿಡಿಸಿ ಉಳಿದ ಬೋಗಿಗಗಳನ್ನು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸೇಲಂ ವಿಭಾಗದ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿಗಳಾದ ಡಾಕ್ಟರ್ ದಿನೇಶ್ ಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಹೊಸೂರು ೦೪೩೪೪-೨೨೨೬೦೩, ಬೆಂಗಳೂರು ೦೮೦- ೨೨೧೫೬೫೫೪ ಮತ್ತು ಧರ್ಮಪುರಿ ೦೪೩೪೨- ೨೩೨೧೧೧ ಸಂಪರ್ಕಿಸಲು ಕೋರಲಾಗಿದೆ.