ಹಳಿ ತಪ್ಪಿದ ರೈಲು ಜನರ ರಕ್ಷಿಸಿದ ಪಡೆ

ಮೈಸೂರು: ಮೇ.20: ಅರಸಿಕೆರೆಯಿಂದ ಹಾವೇರಿಗೆ ಹೋಗುತ್ತಿದ್ದ ವಿಶೇಷ ರೈಲಿನ ಎರಡು ಸಾಮಾನ್ಯ ದರ್ಜೆಯ ಪ್ಯಾಸೆಂಜರ್ ಬೋಗಿಗಳು ಹರಿಹರ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಹಳಿತಪ್ಪಿ ಮಗುಚಿ ಬಿದ್ದಿರುವ ಸನ್ನಿವೇಶ, ತಕ್ಷಣವೇ ರೈಲ್ವೆ ಅಧಿಕಾರಿಗಳು ನಿಗದಿತ ಮಾರ್ಗಸೂಚಿಗಳ ಪ್ರಕಾರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನೋಡುಗರ ಗಮನ ಸೆಳೆಯಿತು.
ಎನ್‍ಡಿಆರ್‍ಎಫ್ ತಂಡವು ಅಸಿಸ್ಟೆಂಟ್ ಕಮಾಂಡೆಂಟ್ ಸೆಂಥಿಲ್ ಕುಮಾರ್ ನೇತೃತ್ವದಲ್ಲಿ ಇಪ್ಪತ್ಮೂರು ಸಿಬ್ಬಂದಿ ಹಾಗೂ ಎಸ್.ಎನ್.ಕಿರಣ್ ಕುಮಾರ್ ನೇತೃತ್ವದ ಎಸ್‍ಡಿಆರ್‍ಎಫ್ ತಂಡ ಮತ್ತು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್ ಅವರ ನೇತೃತ್ವದ ಜಿಲ್ಲಾ ಅಗ್ನಿಶಾಮಕ ದಳದ ತಂಡ 20 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದವು. ರೈಲ್ವೆ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿ ಸ್ಥಳದಲ್ಲಿಯೆ ಪ್ರಥಮ ಚಿಕಿತ್ಸೆ ನೀಡಿ ಎರಡು ಬೋಗಿಗಳಲ್ಲಿ ಸಿಲುಕಿಗೊಂಡಿದ್ದ ಸುಮಾರು 22 ಪ್ರಯಾಣಿಕರನ್ನು ಆಂಬ್ಯುಲೆನ್ಸ್ ನೊಳಗೆ ಕರೆದುಕೊಳ್ಳಲು ಸಹಕರಿಸಿದ ಅಣಕು ಪ್ರದರ್ಶನ ಯಶಸ್ವಿಯಾಯಿತು.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ಮಾತನಾಡಿ, ಇಂತಹ ನಿಯತಕಾಲಿಕ ಕಸರತ್ತಿನ ಮಹತ್ವವನ್ನು ವಿವರಿಸಿದರು. ಮಾನವ ಅಂಶದಿಂದ ಉಂಟಾಗುವ ವಿಪತ್ತುಗಳನ್ನು ತಡೆಗಟ್ಟುವಲ್ಲಿ ಸರಿಯಾದ ವಿಧಾನಗಳನ್ನು ತೋರಿಸುತ್ತವೆ. ಅಮೂಲ್ಯವಾದ ಮಾನವ ಜೀವಗಳ ನಷ್ಟವನ್ನು ತಪ್ಪಿಸಲು ಅತ್ಯಂತ ಮಹತ್ವದ್ದಾಗಿದೆ ಎಂದರು. ರಕ್ಷಣಾ ತಂಡಗಳಲ್ಲದೆ ಆಂಬ್ಯುಲೆನ್ಸ್‍ಗಳೊಂದಿಗೆ ವೈದ್ಯಕೀಯ ವಿಭಾಗದ ಸಿಬ್ಬಂದಿಗಳು, ರೈಲ್ವೆ ರಕ್ಷಣಾ ಪಡೆ, ಅಗ್ನಿಶಾಮಕ ದಳ, ನಾಗರಿಕ ಆಡಳಿತದ ಪ್ರತಿನಿಧಿಗಳು, ಸರ್ಕಾರಿ ರೈಲ್ವೆ ಪೆÇಲೀಸ್ ಮತ್ತು ಸಿವಿಲ್ ಪೆÇಲೀಸರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.