ಹಳದಿ ಹಲ್ಲಿನ ಸಮಸ್ಯೆಗೆ ಮನೆ ಮದ್ದು

ಜನರಿಂದ ನಿಮ್ಮನ್ನು ದೂರವಿಡುವಂತೆ ಈ ಹಲ್ಲುಗಳು ಮಾಡುವುದರಿಂದ ಕೆಲವೊಂದು ಸೂಕ್ತ ಮನೆಮದ್ದುಗಳ ಸಹಾಯವನ್ನು ತೆಗೆದುಕೊಳ್ಳಲೇಬೇಕು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಹಲ್ಲಿನ ಆರೋಗ್ಯವನ್ನು ಪಾಲನೆ ಮಾಡುವುದು ಹಲ್ಲಿಗೆ ಉತ್ತಮವಾಗಿದೆ.

ಫ್ಲೂರಿಡೇಟೆಡ್ ಟೂತ್‌ಪೇಸ್ಟ್ ಬಳಸಿ
ಹಲ್ಲಿನಿಂದ ಹಳದಿಯ ನಿವಾರಣಗೆ ಈ ಪೇಸ್ಟ್ ಸಹಕಾರಿ. ಫ್ಲುರೈಡ್ ನಿಮ್ಮ ಹಲ್ಲುಗಳನ್ನು ಬಲಶಾಲಿಯಾಗಿಸುವುದರಿಂದ ಹಲ್ಲಿನ ಹುಳುಕನ್ನು ನಿವಾರಿಸುತ್ತದೆ. ನೀವು ಸರಿಯಾದ ಟೂತ್‌ಪೇಸ್ಟ್ ಬಳಸುತ್ತಿದ್ದೀರಿ ಎಂಬುದನ್ನು ಖಾತ್ರಪಡಿಸಿಕೊಳ್ಳಿ.
ಒಂದು ಚಮಚದಷ್ಟು ಬೇಕಿಂಗ್ ಸೋಡಾಗೆ ಸ್ವಲ್ಪ ಉಪ್ಪು ಸೇರಿಸಿ. ಪೇಸ್ಟ್ ಬದಲಿಗೆ ಇದನ್ನು ಹಲ್ಲುಜ್ಜಲು ಬಳಸಿ. ಹಲ್ಲಿನ ಹಳದಿಗಟ್ಟುವಿಕೆ ಮತ್ತು ಕರೆಯನ್ನು ನಿವಾರಿಸಿ ವಾರದಲ್ಲಿ ಫಲಿತಾಂಶವನ್ನು ನೀಡುತ್ತದೆ.

ಕಿತ್ತಳೆ ಸಿಪ್ಪೆಯ ಮ್ಯಾಜಿಕ್
ಈ ತಂತ್ರ ನಿಮ್ಮ ಬಾಯಿಯಲ್ಲಿ ಸುವಾಸನೆಯನ್ನು ಹೊಮ್ಮಿಸುವುದು ಖಂಡಿತ. ಹಲ್ಲಿನ ಕರೆಯ ನಿವಾರಣಗೆ ಈ ಟ್ರಿಕ್ಸ್ ಅತ್ಯದ್ಭುತವಾದುದು. ಹಲ್ಲಿನ ಮೇಲೆ ನೇರವಾಗಿ ಕಿತ್ತಳೆ ಸಿಪ್ಪೆಯನ್ನು ಉಜ್ಜಿ ನಂತರ ಬಾಯಿ ಮುಕ್ಕಳಿಸಿ. ಆಗಾಗ್ಗೆ ಇದನ್ನು ಬಳಸುವುದರಿಂದ ಹಲ್ಲಿನ ಕರೆಯನ್ನು ನಿವಾರಿಸಿಕೊಳ್ಳಬಹುದು.

ಹಸಿತರಕಾರಿಗಳು ಮತ್ತು ಹಣ್ಣುಗಳು
ಫೈಬರ್ ಅಂಶವನ್ನು ಒಳಗೊಂಡಿರುವ ಹಸಿತರಕಾರಿಗಳು ಮತ್ತು ಹಣ್ಣುಗಳ ಸೇವನೆಯನ್ನು ಮಾಡಿ. ಇವುಗಳನ್ನು ಸೇವಿಸುವುದೂ ಕೂಡ ಹಲ್ಲಿನ ಹಳದಿ ಕರೆಯನ್ನು ದೂರಮಾಡಲು ಸಹಕಾರಿಯಾಗಿದೆ.
ಹಲ್ಲಿನ ಹಳದಿ ಕಲೆ ನಿವಾರಣೆಗೆ ಎಳ್ಳಿನ ಬೀಜ ಅತ್ಯುತ್ತಮವಾದುದು. ಎಳ್ಳನ್ನು ಕೊಂಚ ಬಿರುಸಾಗಿ ಹುಡಿಮಾಡಿಟ್ಟುಕೊಳ್ಳಿ. ನಂತರ ಈ ಹುಡಿಯನ್ನು ಬಳಸಿ ಹಲ್ಲುಜ್ಜಿ. ನಿಮ್ಮ ಹಲ್ಲಿನಿಂದ ಕರೆ ಮಾಯವಾಗಿ ಫಳಫಳನೆ ಹೊಳೆಯುತ್ತದೆ.

ಖಾರವಾದ ಆಹಾರಗಳನ್ನು ಸೇವಿಸಿ
ಇದು ಕೊಂಚ ಅಚ್ಚರಿಯನ್ನುಂಟು ಮಾಡಿದರೂ ನಿಜವಾದ ವಿಷಯವಾಗಿದೆ. ಆದಷ್ಟು ಹೆಚ್ಚು ಖಾರದ ಆಹಾರ ಪದಾರ್ಥಗಳನ್ನು ಸೇವಿಸಿ. ಜೊಲ್ಲು ಗ್ರಂಥಿಗಳಲ್ಲಿ ಲಾಲಾರಸ ಸ್ರವಿಸುವಿಕೆಯನ್ನು ಹೆಚ್ಚಿಸಿ ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿರಿಸಲು ಖಾರದ ಆಹಾರ ಸಹಾಯ ಮಾಡುತ್ತದೆ.