ಹಳಗುಣಕಿ, ಬಬಲಾದ ಗ್ರಾ.ಪಂ ಸಿಇಒ ಭೇಟಿ

ಇಂಡಿ :ಫೆ.15:ವಿಜಯಪುರದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಇಂದು ಇಂಡಿ ತಾಲೂಕಿನ ಬಬಲಾದ ಮತ್ತು ಚವಡಿಹಾಳ ಗ್ರಾ.ಪಂ ಗಳಿಗೆ ಭೇಟಿ ಕಾಮಗಾರಿಗಳನ್ನು ವೀಕ್ಷಿಸಿದರು.
ಬಬಲಾದ ಗ್ರಾ.ಪಂ ದ ಹಳಗುಣಕಿ ಗ್ರಾಮದ ಸರಕಾರಿ ವಸತಿ ನೀಲಯಕ್ಕೆ ಭೇಟಿ ಅಲ್ಲಿಯ ಸ್ವಚ್ಛತೆ, ಅಹಾರ ಪದಾರ್ಥ, ಭೋಜನಾಲಯ, ಮತ್ತು ಗ್ರಂಥಾಲಯ ವೀಕ್ಷಿಸಿ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಕುರಿತು ಸೌಲಭ್ಯಗಳ ಕುರಿತು ಚರ್ಚಿಸಿ ಅಲ್ಲಿಯ ಸೌಲಭ್ಯಗಳ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು.
ಅದಲ್ಲದೆ ಶಾಲೆಯಲ್ಲಿ ಕುಡಿಯುವ ನೀರಿನ ತೊಂದರೆ ಇರುವ ಮಾಹಿತಿ ಸಂಗ್ರಹಿಸಿ ಈ ಕೂಡಲೇ ಕುಡಿಯುವ ಸಮಸ್ಯೆ ಬಗೆ ಹರಿಸಲು ಪಿಡಿಒ ಇವರಿಗೆ ಸಲಹೆ ನೀಡಿದರು.
ನಂತರ ಗ್ರಾ.ಪಂ ಬಬಲಾದ ಗೆ ಭೇಟಿ ನೀಡಿ ಗ್ರಾ.ಪಂ ಕಟ್ಟಡ, ಮಳೆ ನೀರು ಕೊಯ್ಲಿ ಮತ್ತು ನರ್ಸರಿಯಲ್ಲಿ ಸಸಿಗಳನ್ನು ವೀಕ್ಷಿಸಿದರು.
ಪಿಡಿಒ ಸಿದರಾಯ ಬಿರಾದಾರ, ಇಒ ಬಾಬು ರಾಠೋಡ, ಗ್ರಾ.ಪಂ ಅಧ್ಯಕ್ಷ ಸುನೀಲಗೌಡ ಬಿರಾದಾರ, ಸದಸ್ಯರಾದ ತುಕಾರಾಮ ದಶವಂತ, ಹಣಮಂತ ಬಿರಾದಾರ, ಭೀಮರಾಯ ಪಾರೆ ಮತ್ತಿತರಿದ್ದರು.