ಹಳಕಟ್ಟಿ ವಚನೋತ್ಸವ ರಾಷ್ಟ್ರೀಯ ೮ನೇ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಡಾ.ಜಯದೇವಿ ಗಾಯಕವಾಡ ಸರ್ವಾನುಮತದಿಂದ ಆಯ್ಕೆ

ಕಲಬುರಗಿ:ನ.13:ಬರುವ ಡಿಸೆಂಬರ್ 10 ಮತ್ತು 11ರಂದು ಡಾ.ಎಸ್.ಎಂ.ಪಂಡಿತ ರಂಗ ಮಂದಿರ ದಲ್ಲಿ ಜರುಗುವ ಹಳಕಟ್ಟಿ ವಚನೋತ್ಸವ ರಾಷ್ಟ್ರೀ ಯ ೮ನೇ ವಚನ ಸಾಹಿತ್ಯ ಸಮ್ಮೇಳನದ ಸರ್ವಾ ಧ್ಯಕ್ಷರಾಗಿ ಸಾಹಿತಿ-ಚಿಂತಕ ಡಾ.ಜಯದೇವಿ ಗಾಯಕವಾಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆಯೆಂದು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ(ರಿ) ಸಂಸ್ಥಾ ಪಕ ಅಧ್ಯಕ್ಷ ಡಾ.ಬಿ.ಎಂ.ಪಾಟೀಲ ತಿಳಿಸಿದ್ದಾರೆ.
‌‌ ಸತ್ಯಂ ಕಾಲೇಜಿನಲ್ಲಿ ಸೇರಿದ ಸಭೆಯ ಅಧ್ಯಕ್ಷ ತೆ ವಹಿಸಿ ಘೋಷಣೆ ಮಾಡಿದರು.ಈಗಾಗಲೇ ಏಳು ಸಮ್ಮೇಳನ ಜರುಗಿದ್ದು ಎಂಟನೆಯ ಸಮ್ಮೇ ಳನಕ್ಕೆ ಆಯ್ಕೆಯಾಗುವಲ್ಲಿ ದಲಿತ ಸಾಹಿತಿಯನ್ನು,ಕಲ್ಯಾಣ ಕರ್ನಾಟಕ ದವರನ್ನ,ಕನಿ ಷ್ಟ ಐದು ವಚನ ಸಾಹಿತ್ಯದ ಕೃತಿ,ಆಧುನಿಕ ವಚನ ರಚಿಸಿರಬೇಕು,ಕನ್ನಡ ಸಾಹಿತ್ಯ ಮತ್ತು ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮ್ಮೇಳನಾಧ್ಯಕ್ಷರಾ ಗಿರಬಾರದು,ನಡೆ ನುಡಿ.ಬದುಕು,ಬರಹ ಒಂದಾಗಿ ರಬೇಕು ಎಂಬ ಐದು ನಿಯಮದಲ್ಲಿ ಈ ಹಿಂದೆ ಆದ ಎರಡು ಸಭೆಗಳಲ್ಲಿ ಪ್ರಸ್ತಾಪವಾದ ವಿಚಾರಗ ಳಿಂದ ಆಯ್ಕೆ ಮಾಡಲಾಗಿದೆ.ಈಗಾಗಲೇ ಡಾ.ಜಯದೇವಿ ಅವರು ಮೂವತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು ಕಾಳವ್ವೆ,ಬಸವಣ್ಣ- ಅಂಬೇಡ್ಕರ್,ಬಯಲ ಬೆಳಕಿನ ವಚನಗಳು ಆಧು ನಿಕ ವಚನಗಳು,ವಚನಕಾರ್ತಿಯರು,ವಚನಕಾ ರ್ತಿಯರ ಸಾಕ್ಷಿ ಪ್ರಜ್ಞೆ,ಉರಿಲಿಂಗ ಪೆದ್ದಿ-ಕಾಳವ್ವೆ ಸಂಪಾದನೆ,ಸತ್ಯಕ್ಕ,‌ಕೃತಿಗಳಲ್ಲದೇ ಅವರ ಗಜಲ್, ವಚನ,ಹಾಯಿಕು,ರುಬಾಯಿ,ತಂಕಾ,ಹೋರಾಟದ ಹಾಡುಗಳಲ್ಲಿ ಸಹ ಶರಣರ ವಿಚಾರಧಾರೆ ವ್ಯಕ್ತವಾಗಿವೆ.ನೂರಾರು ವಚನ ಸಾಹಿತ್ಯ ಕುರಿತ ಲೇಖನ,ಉಪನ್ಯಾಸ ನೀಡಿದ್ದಾರೆ.ಹೀಗಾಗಿ ಅವರ ಸಾಧನೆ ಸೇವೆ ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದರು.
‌‌ನಾಲ್ಕು ಗೋಷ್ಠಿಗಳು,ಹಳಕಟ್ಟಿ ಶ್ರೀ ಪ್ರಶಸ್ತಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿವೆ. ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರ ಸಾ ನಿಧ್ಯದಲ್ಲಿ ಶಾಸಕ ಬಸವರಾಜ ಮತ್ತಿಮೂಡ ಅವರ ಸ್ವಾಗತ ಸಮಿತಿ ಅಧ್ಯಕ್ಷತೆಯಲ್ಲಿ ಜರುಗುವುದೆಂದು ಹೇಳಿದರು.ಇದೇ ಸಂದರ್ಭದ ಲ್ಲಿ ಸ್ಮರಣ ಸಂಚಿಕೆ ವಚನ ಕಲ್ಯಾಣ,೨೧ ಆಧುನಿ ಕ ವಚನ ಸಂಪುಟ ಬಿಡುಗಡೆ ಮಾಡಲಾಗುವುದೆಂ ದರು.ಹಿರಿಯ ಸಾಹಿತಿ ಬೀದರನ ಹಂಶಕವಿ,ಸುಬ್ರಾವ್ ಕುಲಕರ್ಣಿ,ವಿನೋದಕುಮಾ ರ ಜೇನವೆರಿ,ಶಿವಲಿಂಗಪ್ಪ ಅಷ್ಟಗಿ,ಡಾ.ಹನಮಂತ ರಾವ್ ದೊಡ್ಡಮನಿ,ಸುನೀಲಕುಮಾರ ಬಿರಾದಾರ ಡಾ.ಗಾಂಧೀಜಿ ಮೊಳಕೇರಿ,ಡಾ.ಚಿ್ಅನಂದ ಕುಡ್ಡ ನ್,ಡಾ.ಗವಿಸಿದ್ಧಪ್ಪ ಪಾಟೀಲ,ಡಾ.ಸುನೀಲ ಜಾಬಾದಿ, ಇತರರು ಇದ್ದರು.