ಹಲ್ಲೆ ಮಾಡಿ ಜೀವಬೆದರಿಕೆ :6 ತಿಂಗಳು ಜೈಲು ಶಿಕ್ಷೆ

ಕಲಬುರಗಿ,ಆ 17: ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ,ಎರಡು ಹಲ್ಲು ಮುರಿದು ಜೀವ ಬೆದರಿಕೆ ಹಾಕಿದ ಆರೋಪ ಸಾಬೀತಾದ್ದರಿಂದ ಅಪರಾಧಿಗೆ ಚಿಂಚೋಳಿಯ ಜೆಎಂಎಫ್‍ಸಿ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ರವಿಕುಮಾರ ಅವರು 6 ತಿಂಗಳು ಸಾದಾ ಜೈಲು ಶಿಕ್ಷೆ,26 ಸಾವಿರರೂ ದಂಡ ವಿಧಿಸಿ ಆದೇಶಿಸಿದ್ದಾರೆ.
ಚಿಂಚೋಳಿಯ ಸುಂದರ ಊರ್ಫ ಸುನೀಲಕುಮಾರ ನಾಗಪ್ಪ ರಾಮತೀರ್ಥ ಶಿಕ್ಷೆಗೊಳಗಾದವ.ಈತ2017 ರ ಅಕ್ಟೋಬರ್ 8 ರಂದು ಚಂದಾಪುರ ಕ್ರಾಸ್ ಹತ್ತಿರ ಹೊಟೇಲೊಂದರ ಮುಂದೆ ,ಅರ್ಜುನ ರವಿಕುಮಾರ ಚಂದಾಪುರ ಎಂಬಾತನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ. ಈ ಕುರಿತು
ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಾಂತಕುಮಾರ ಜಿ ಪಾಟೀಲ ಅವರು ವಾದ ಮಂಡಿಸಿದ್ದರು.