ಹಲ್ಲೆ ಮಾಡಿದ ಆರೋಪಿತರಿಗೆ ಬಂಧಿಸುವಂತೆ ಪ್ರತಿಭಟನೆ

ಇಂಡಿ; ಸೆ.21:ತಾಲೂಕಿನ ಗುಂದವಾನ ಗ್ರಾಮದ ದಲಿತ ಮಹಿಳೆಯನ್ನು ಸವರ್ಣಿಯರು ಮಾರಣಾಂತಿಕ ಹಲ್ಲೆ ಮಾಡಿ ಘಾಯಗೋಳಿಸಿರುವ ಆರೋಪಿತರನ್ನು ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿ ಡಿ.ಎಸ್.ಎಸ್ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಇಂದು ಬುದುವಾರ ಪಟ್ಟಣದ ಪ್ರವಾಸಿ ಮಂದಿರದಿಂದ ಹೋರಟ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತ , ಅಂಬೇಡ್ಕರ ವೃತ್ತ ಹಾಗೂ ಮಹಾವೀರ ವೃತ್ತದ ಮೂಲಕ ಸಾಗಿ ಮಿನಿ ವಿಧಾನಸೌಧಾಕ್ಕೆ ತಲುಪಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಅವರ ಅನುಪಸ್ಥಿತಿಯಲ್ಲಿ ತಹಶೀಲ್ದಾರ ಕಡಕಭಾವಿಯವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ಡಿ,ಎಸ್ ಎಸ್ ಜಿಲ್ಲಾ ಸಂಘಟನಾ ಸಂಚಾಲಕ ( ನಾಗವಾರ ಬಣ) ಗುರುರಾಜ ಗುಡಿಮನಿ ಮಾತನಾಡಿ ಸ್ವಾತಂತ್ರ್ಯ ಸಿಕ್ಕು 75 ವರ್ಷಗತಿಸಿದರೂ ದಲಿತರಿಗೆ ಸಮಾನತೆ ಇನ್ನು ಸಿಗದೆ ಇರುವುದು ವಿಷಾದನೀಯ ಸಂಗತಿ, ಭಾರತ ರತ್ನ ಡಾ ,ಬಿ,ಆರ್ ಅಂಬೇಡ್ಕರವರು ಸರ್ವರಿಗೂ ಸಮಾನ ಹಕ್ಕು ನೀಡಿದರೂ ಕೂಡಾ ಅಸ್ಪಶ್ರ್ಯತೆ ಜೀವಂತ ಉಳಿದಿದೆ. ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ದಲಿತ ಮಹಿಳೆಗೆ ಬರ್ಬರ ಕೊಲೆ ಮಾಡಿದರೂ ಕೂಡಾ ಇಲ್ಲಿಯವರೆಗೆ ಆರೋಪಿತರು ಯಾರು ಎಂಬುದು ಪೊಲೀಸ್ ಇಲಾಖೆ ಪತ್ತೆ ಹಚ್ಚಿಲ್ಲ ಎಂದರೆ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಅರ್ಥ. ಗುಂದವಾನ ಗ್ರಾಮದಲ್ಲಿ ದಲಿತ ಮಹಿಳೆಗೆ ಮೇಲ್ಜಾತಿಯ ಪುರುಷರು ಮಾರಣಾಂತಿಕ ಹಲ್ಲೆ ಮಾಡಿದರೂ 15 ದಿನಗಳು ಕಳೇದರೂ ಯಾವೋಬ್ಬ ಆರೋಪಿಗಳಿಗೆ ಬಂಧಿಸಿಲ್ಲ. ದೌರ್ಜನ್ಯ ಎಸಗಿದ ಆರೋಪಿತರು ಗ್ರಾಮದಲ್ಲಿ ತೀರುಗಾಡುತ್ತಿದ್ದಾರೆ ಪೊಲೀಸ್ ಇಲಾಖೆ ಬಂಧಿಸಿಲ್ಲ. ಒಂದು ವೇಳೆ ದಲಿತರಿಗೆ ಏನಾದರೂ ಆದರೆ ಮುಂದಿನ ಆಗು ಹೋಗುಗಳಿಗೆ ಪೊಲೀಸ್ ಇಲಾಖೆಯ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ಕೂಡಲೆ ಪೊಲೀಸ್ ಇಲಾಖೆ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಹಾಗೂ ಗುಂದವಾನ ಗ್ರಾಮದ ದಲಿತ ಓಣಿಗೆ ಪೊಲೀಸ್ ರಕ್ಷಣೆ ನೀಡಿ ದೌರ್ಜನ್ಯ ಕಾಯ್ದೆಯಡಿ ದಲಿತ ಕುಟುಂಬಗಳಿಗೆ ಸರಕಾರದಿಂದ ಸಿಗುವ ಸೌಲಭ್ಯ ಒದಗಿಸಬೇಕು ಎಂದು ಮನವಿ ಮೂಲಕ ಸರಕಾರಕ್ಕೆ ಆಗ್ರಹಿಸಿದ್ದಾರೆ.
ದಲಿತ ರಕ್ಷಣಾ ವೇದಿಕೆ ವಿಜಯಪೂರ ಜಿಲ್ಲಾ ಶಾಖೆಯ ಜಿಲ್ಲಾಧ್ಯಕ್ಷ ಧರ್ಮರಾಜ ಸಾಲೋಟಗಿ ಮಾತನಾಡಿ ಕಳೆದ 15 ದಿನಗಳಿಂದ ಗುಂದವಾನ ಗ್ರಾಮದ ದಲಿತ ಮಹಿಳೆಗೆ ಮನಸೋ ಇಚ್ಛೆ ಬಂದಂತೆ ಸವರ್ಣಿಯ ಪುರುಷರು ಲಿಂಗ ಭೇದವಿಲ್ಲದೆ ಮಹಿಳೆಗೆ ಹೊಡೇದಿದ್ದಾರೆ ಇಷ್ಠಾದರೂ ಇಲ್ಲಿಯವರೆಗೂ ಪೊಲೀಸ್ ಇಲಾಖೆ ಬಂಧಿಸಿಲ್ಲ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಾ ದಲಿತ ಕೆರಿಗೆ ಹೋಗಿ ನೊಂದ ಕುಟುಂಬಕ್ಕೆ ಸಾಂತ್ವನ ಕೂಡಾ ಹೇಳಿಲ್ಲ . 15 ದಿನಗಳ ನಂತರ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಕೇಳಿದರೆ ಈಗ ಹೋಗುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ದೌರ್ಜನ್ಯ ಎಸಗಿದ ತಕ್ಷಣ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ನೊಂದ ಕುಟುಂಬಕ್ಕೆ ಆತ್ಮಸ್ಥೆರ್ಯ ತುಂಬಬೇಕು ಎಂಬ ನಿಯಮ ಇದ್ದರೂ ಕೂಡಾ ಅಧಿಕಾರಿ ದಲಿತರಿಗೆ ನ್ಯಾಯ ನೀಡುವಲ್ಲಿ ವಿಫಲರಾಗಿದ್ದಾರೆ. ಕೂಡಲೆ ಆರೋಪಿತರನ್ನು ಬಂಧಿಸಿ ಗಡಿಪಾರು ಮಾಡಬೇಕು. ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ ಇಂಡಿ ಇವರನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಬೇರೆ ಇಲಾಖೆಗೆ ವರ್ಗಾಯಿಸಬೇಕು. ನೊಂದ ದಲಿತ ಕುಟುಂಬಗಳಿಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಒದಗಿಸಬೇಕು ಒಂದು ವೇಳೆ ಮೇಲಿನ ಬೇಡಿಕೆಗಳು ಇಡೇರದಿದ್ದರೆ ರಾಜ್ಯವ್ಯಾಪಿ ಉಗ್ರಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.

   ಡಿ.ಎಸ್ .ಎಸ್ ಬೆಳಗಾವಿ(ನಾಗವಾರ ಬಣ)  ವಿಭಾಗಿಯ ಸಂಚಾಲಕ  ರಾವುತ ತಳಕೇರಿ , ಹುಯೋಗಿ ತಳ್ಳೋಳ್ಳಿ, .ಯಲ್ಲು ಪಡಸಲಗಿ ,  ಲಕ್ಷ್ಮಣ ಬನಸೋಡೆ, ಯಲ್ಲಪ್ಪ ವಠಾರ ,ರಾಜು ದಿಂಡವಾರ ಸೇರಿದಂತೆ   ಪ್ರತಿಭಟನೆ ಉದ್ದೇಶಿಸಿ ಪ್ರಮುಖ ಮುಖಂಡರು ಮಾತನಾಡಿದರು.  

ಶೇಖರ ಶಿವಶರಣ, ಯಲ್ಲಪ್ಪ ವಠಾರ, ಸುನೀಲ ಅಗರಖೇಡ, ಸಂತೋಷ ತಳಕೇರಿ, ಮಹೇಶ ಶಿವಶರಣ, ಗಂಗಬಾಯಿ ಹರಿಜನ ,ಕೀರಣ ತೇಲಗಿ, ಷೇಣ್ಮುಖ ಕಾಂಬಳೆ. ಮಂಜುನಾಥ ಮೇಲಿಮನಿ,ವಿಜಯಕುಮಾರ ಕಾಂಬಳೆ (ಕೊಟ್ನಾಳ) , ಮಹಾಂತೇಶ ಹೊಸಮನಿ, ರಾಜು ಶಿರಗೂರ ,ಸಿದ್ದರಾಯ ಶಿರಗೂರ, ಮಿಲಿಂದ ಮಸಳಿ, ಶೆಟ್ಟೆಪ್ಪ ಶಿವಪೂರ, ವಿರುಪಾಕ್ಷಿ ನಿಂಬಾಳ, ಕಲಾವತಿ ಹರಿಜನ, ಎಲ್ಲವ್ವ ವಠಾರ ಸರೂಬಾಯಿ ಕಟ್ಟಿಮನಿ,ಶೋಭಾ ವಠಾರ, ಮಲ್ಲಯ್ಯಾ ಕಾಂಬಳೆ.ಪರಶುರಾಮ ಕಾಂಬಳೆ, ದುಂಡವ್ವ ನರೇನವರ್, ಮಾನಂದ ಕಟ್ಟಿಮನಿ,ವಿಠ್ಠಲ ಪಡನೂರ, ವಿಕಾಸ ಬನಸೊಡೆ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.