ಹಲ್ಲೆ ಮಾಡಿದ ಆರೋಪಿಗೆ ದಂಡ

ಕಲಬುರಗಿ,ಸೆ.22-ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಜಗಳ ತೆಗೆದು, ಅವಾಚ್ಯ ಶಬ್ಧಗಳಿಂದ ಬೈದು ಕಬ್ಬಿಣದ ರಾಡ್ ನಿಂದ ಅನೀಲ್ ಹಣಮಂತ ಚಿಂಚನಸೂರ ಹಾಗೂ ಇತರರ ಮೇಲೆ ಹಲ್ಲೆ ನಡೆಸಿದ ಆರೋಪಿ ಶರಣಬಸಪ್ಪ ಬಸಗೊಂಡ ಜವಳಗಾ (ಬಿ) ಎಂಬಾತನಿಗೆ ಕಲಂ 323 ಐಪಿಸಿ ಅಡಿಯಲ್ಲಿ 1000 ದಂಡ, ಕಲಂ 324 ಐಪಿಸಿ ಅಡಿಯಲ್ಲಿ 14000 ದಂಡ ವಿಧಿಸಿ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಗದೀಶ ವಿ.ಎನ್.ತೀರ್ಪು ನೀಡಿದ್ದಾರೆ.
ದಂಡದ ಹಣದಲ್ಲಿ ಗಾಯಾಳು ಅನಿಲ್ ಗೆ 25 ಸಾವುರ ರೂ.ನಷ್ಟ ಪರಿಹಾರದ ರೂಪದಲ್ಲಿ ನೀಡಲು ಆದೇಶಿಸಲಾಗಿದೆ. 2014ರ ಮೇ.6 ರಂದು ನಡೆದ ಈ ಘಟನೆಗೆ ಸಂಬಂಧಿಸಿದಂತೆ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರಕ್ಷಕ ಉಪ ನಿರೀಕ್ಷಕ ರವಿಕುಮಾರ ಧರ್ಮಟ್ಟಿ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ 3ನೇ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.