ಹಲ್ಲೆ ಖಂಡಿಸಿ ಪ್ರತಿಭಟನೆ

ಲಕ್ಷ್ಮೇಶ್ವರ, ನ9: ತ್ರಿಪುರ ರಾಜ್ಯದಲ್ಲಿ ಕೋಮು ಗಲಭೆಯು ಉಗ್ರ ರೂಪ ತಾಳಿದ್ದು ಗಲಭೆಕೋರರು ಮಹಿಳೆಯರು ಮಕ್ಕಳು ವೃದ್ಧರು ಎನ್ನದೆ ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಖಂಡಿಸಿ ಪಟ್ಟಣದಲ್ಲಿ ಸೋಮವಾರ ನೂರಾರು ಮುಸ್ಲಿಮ್ ಯುವಕರು ಕೈಗೆ ಕಪ್ಪುಪಟ್ಟಿ ಕೊಂಡು ದೂದ್ ಪೀರ ದರ್ಗಾದಿಂದ ಮೌನ ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ದರ್ ಕಚೇರಿ ಮುಂದೆ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತು.
ಸಭೆಯಲ್ಲಿ ಮಾತನಾಡಿದ ಮೊಹಮ್ಮದ್ ಷಾಹ ಅವರು ತ್ರಿಪುರಾದಲ್ಲಿ ಮತೀಯ ಗಲಭೆ ಉಲ್ಬಣಗೊಂಡಿದ್ದು ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಮುಸ್ಲಿಂ ಜನಾಂಗದ ಆಸ್ತಿ-ಪಾಸ್ತಿಗಳ ಮೇಲೆ ಮನೆಗಳ ಮೇಲೆ ಬೆಂಕಿ ಹಚ್ಚುವಂತಹ ಹೀನಕೃತ್ಯಗಳು ನಡೆದಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡಲೇ ತ್ರಿಪುರ ಮುಖ್ಯಮಂತ್ರಿಗೆ ಗಲಭೆಯನ್ನು ನಿಯಂತ್ರಿಸುವಂತೆ ಸೂಚಿಸ ಬೇಕಲ್ಲದೆ ತಪ್ಪು ಮಾಡಿದವರು ಮುಸ್ಲಿಮರ ಇರಲಿ ಅಥವಾ ಹಿಂದುಗಳೇ ಇರಲಿ ಅವರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಜೀರ್ ಅಹಮ್ಮದ್ ಗದಗ್, ಇಸಾಕ್ ಫತೇಖಾನವರ, ಇರ್ಷಾದ್ ಕಿತ್ತೂರ್, ಜಾಕಿರ್ ಹುಸೇನ್ ಹವಾಲ್ದಾರ್, ಮೊಹಮ್ಮದ ಕಾರಡಗಿ, ಸಾಧಿಕ್ ಹುಲಿಗೇರಿ, ಸಾಧಿಕ್ ಸಿದ್ಧಿ, ಗೌಸ್ ಮೋದೀನ ಹುಲಗೂರ್, ತಾಸಿಫ್ ಮಂಜಲಾಪುರ, ಸೇರಿದಂತೆ ಇಮಾಮ್ ಗಳು ಹಾಗೂ ಕಮಿಟಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ತಾಶೀಲ್ದಾರ್ ಕಾರ್ಯಾಲಯದ ಉಪತಹಶೀಲ್ದಾರ್ ಮಂಜುನಾಥ್ ದಾಸಪ್ಪನವರ ಮನವಿ ಸ್ವೀಕರಿಸಿದರು.