
ಕಲಬುರಗಿ,ಮಾ 19: ನಗರದ ಆಳಂದ ಚೆಕ್ ಪೋಸ್ಟ್ ಹತ್ತಿರ ಮಧ್ಯರಾತ್ರಿ ವ್ಯಕ್ತಿಗಳಿಬ್ಬರ ಮೇಲೆ ಹಲ್ಲೆ ಮಾಡಿ ಮೊಬೈಲ್, 5 ಸಾವಿರ ರೂ ನಗದುಹಣ ಹಾಗೂ ಮೋಟಾರ್ ಸೈಕಲ್ ಸುಲಿಗೆ ಮಾಡಿದ್ದ ಮೂವರು ದರೋಡೆಕೋರರನ್ನು ಸಬ್‍ಅರ್ಬನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿಯ ಅನೀಲ ಶಿವಶರಣಪ್ಪ ಪೂಜಾರಿ, ಶಶಿಕಾಂತ ಅಲಿಯಾಸ್ ಪಿಂಟ್ಯಾ ತೀರ್ಥಪ್ಪ ಹಡಪದ, ವಿಶಾಲ ಭೀಮಾಶಂಕರ್ ರಾಜನಾಳ ಬಂಧಿತರು.ಬಂಧಿತರಿಂದ ಸುಮಾರು 10 ಸಾವಿರ ಮೌಲ್ಯದ ಮೊಬೈಲ್,2 ಸಾವಿರ ರೂ ನಗದು ಮತ್ತು 1.5 ಲಕ್ಷ ರೂ ಮೌಲ್ಯದ ಮೋಟಾರ್ ಸೈಕಲ್ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ಜಪ್ತಿ ಪಡಿಸಿಕೊಳ್ಳಲಾಗಿದೆ.
ವಿಜಯಪುರದ ಸಾದೀಕ್ ತಂದೆ ಶಬ್ಬಿರ್ ಲಸಕೇರಿ ಮತ್ತು ಸಮೀರ್ ಎಂಬುವವರು ಮಾ. 12 ರಂದು ನಗರದ ಆಳಂದ ಚೆಕ್ ಪೋಸ್ಟ್ ಹತ್ತಿರ ಮಧ್ಯರಾತ್ರಿ ಕಾಯುತ್ತಿದ್ದಾಗ ಬೈಕ್ ಮತ್ತು ಆಟೋದಲ್ಲಿ ಬಂದ ಸುಲಿಗೆಕೋರರು ಬೆದರಿಸಿ ಹಲ್ಲೆ ಮಾಡಿ ಬೈಕ್ ಹಣ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.
ದರೋಡೆಕೊರರ ಪತ್ತೆಗಾಗಿ ಡಿಸಿಪಿಗಳಾದ ಅಡೂರು ಶ್ರೀನಿವಾಸಲು ಐ.ಎ.ಚಂದ್ರಪ್ಪ , ಸಬ್‍ಅರ್ಬನ್ ಉಪವಿಭಾಗದ ಎಸಿಪಿ ಗೀತಾ ಬೇನಾಳ, ಹಾಗೂ ಸಬ್‍ಅರ್ಬನ್ ಠಾಣೆ ಪಿಐ ಬಸವರಾಜು ಅವರ ನೇತೃತ್ವದಲ್ಲಿ ಅಶೋಕ, ಸಿರಾಜಪಟೇಲ , ಮಲ್ಲಿಕಾರ್ಜುನ, ಪ್ರಕಾಶ,ನಾಗೇಂದ್ರ, ಅನೀಲಮತ್ತು ಅನೀಲಅವರನ್ನು ಒಳಗೊಂಡ ತಂಡವು ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಗರ ಪೆÇಲೀಸ ಆಯುಕ್ತ ಚೇತನ್.ಆರ್ ಅವರು ಶ್ಲಾಘಿಸಿದ್ದಾರೆ.