ಹಲ್ಲೆಮಾಡಿ ಕಿರಾಣಿವ್ಯಾಪಾರಿಯ ಹಣ ಲೂಟಿ

ಕಲಬುರಗಿ, ಅ 24: ಕಿರಾಣಿ ಅಂಗಡಿ ವ್ಯಾಪಾರಿಯ ಮೇಲೆ ಹಲ್ಲೆ ಮಾಡಿ 60 ಸಾವಿರ ರೂ ನಗದು ದೋಚಿಕೊಂಡು ಹೋದ ಘಟನೆ ನಗರದ ಜಿಡಿಎ ಕಾಲೋನಿ ಗೋಕುಲ ನಗರದ ಹತ್ತಿರ ನಡೆದಿದೆ.
ಹುಮನಾಬಾದ್ ಬೇಸ್‍ನಲ್ಲಿ ಕಿರಾಣಿ ಅಂಗಡಿ ನಡೆಸುವ ಜಿಡಿಎ ಕಾಲೋನಿ ಗೋಕುಲ ನಗರದ ನಿವಾಸಿ ರಾಕೇಶನಾರಾಯಣ ಗೋಯಲ್ ಹಲ್ಲೆಗೊಳಗಾಗಿ ಹಣ ಕಳೆದುಕೊಂಡವರು.
ಕಿರಾಣಿ ವ್ಯಾಪಾರಿ ರಾಕೇಶನಾರಾಯಣ ತಮ್ಮ ದ್ವಿಚಕ್ರವಾಹನದಲ್ಲಿ 60 ಸಾವಿರ ರೂ. ನಗದು ಹಣ ಇಟ್ಟುಕೊಂಡು ಮನೆಗೆ ಹೊರಟಾಗ ಮೂತ್ರ ವಿಸರ್ಜನೆಗೆಂದು ನಡುದಾರಿಯಲ್ಲಿ ಗಾಡಿ ನಿಲ್ಲಿಸಿದ್ದರು. ಆಗ ಮೂರು ಜನ ಅಪರಿಚಿತರು ಇವರ ಮೇಲೆ ಹಲ್ಲೆಮಾಡಿ ನೆಲಕ್ಕೆ ಕೆಡವಿ ಗಾಡಿಯ ಕೀಲಿ ಕಿತ್ತುಕೊಂಡು,ಸೈಡ್ ಬಾಕ್ಸ್‍ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ರಾಕೇಶ ನಾರಾಯಣರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.ಚೌಕಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.