ಹಲ್ಲು ನೋವಿಗೆ ಸರಳ ಸಲಹೆ

ಬೆಳ್ಳುಳ್ಳಿಯು ಒಂದು ಪ್ರಾಕೃತಿಕವಾದ ಬ್ಯಾಕ್ಟೀರಿಯಾ ನಿರೋಧಕವಾಗಿದೆ. ಬೆಳ್ಳುಳ್ಳಿಯ ರಸವು ಇನ್‌ಫೆಕ್ಷನ್ ಅನ್ನು ಹೋಗಲಾಡಿಸುತ್ತದೆ.

ಲವಂಗದ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ, ಆಂಟಿ ಆಕ್ಸಿಡೆಂಟು ಮತ್ತು ಅರವಳಿಕೆ ನೀಡುವ ಗುಣಗಳು ಹಲ್ಲುನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಅದರಲ್ಲೂ ಸೋಂಕು ಉಂಟಾಗಿ ನೋವಾಗುತ್ತಿದ್ದರೆ ಈ ವಿಧಾನ ಸೂಕ್ತವಾಗಿದೆ

ಹಲ್ಲು ನೋವಿಗೆ ಉಪ್ಪು ತತ್‌ಕ್ಷಣದ ನೋವು ನಿವಾರಕವಾಗಿ ಕೆಲಸಕ್ಕೆ ಬರುವ ಅಂಶವಾಗಿದೆ. ಇದಕ್ಕೆಲ್ಲ ಬೇಕಾಗಿರುವುದು ಕೇವಲ ಎರಡು ವಸ್ತುಗಳು ಒಂದು ಬೆಚ್ಚನೆಯ ನೀರು ಮತ್ತು ಎರಡು ಸ್ವಲ್ಪ ಉಪ್ಪು. ಇವೆರಡನ್ನು ಬೆರೆಸಿ ಅದರಿಂದ ಬಾಯಿಯನ್ನು ಮುಕ್ಕುಳಿಸಿ. ಮೊದಲೆರಡು ಬಾರಿ ಬಾಯಿಯನ್ನು ಮುಕ್ಕುಳಿಸುವಾಗ ನಿಮಗೆ ನೋವಿನ ಅನುಭವವಾಗಬಹುದು. ಆದರೆ ನಂತರ ನಿಮಗೆ ನೋವಿನಿಂದ ಉಪಶಮನ ದೊರೆಯುವುದು ಸುಳ್ಳಲ್ಲ. ಇದನ್ನು ಕೆಲವು ಬಾರಿ ಪುನರಾವರ್ತಿಸಿ ಮತ್ತು ಶೇ.೯೦ರಷ್ಟು ನೋವನ್ನು ಕಡಿಮೆ ಮಾಡಿಕೊಳ್ಳಿ.

ಇದರ ಕೀಟಾಣುವಿರೋಧಿ ಮತ್ತು ನಂಜುನಿರೋಧಕ ಗುಣಗಳು ಹಲ್ಲುನೋವು ಕಡಿಮೆಗೊಳಿಸಲು ನೆರವಾಗುತ್ತವೆ. ವಿಶೇಷವಾಗಿ ಒಸಡಿನಲ್ಲಿ ಸೋಂಕು ಉಂಟಾಗಿದ್ದರೆ ಈ ವಿಧಾನ ಉತ್ತಮವಾಗಿದೆ. ಹಸಿ ಈರುಳ್ಳಿಯನ್ನು ನೋವಿರುವ ಹಲ್ಲುಗಳ ಭಾಗದಲ್ಲಿ ಅಗಿಯಿರಿ. ಇಲ್ಲದಿದ್ದರೆ ಕೆಲವು ನಿಮಿಷಗಳವೆರೆಗೆ ಹಸಿ ಈರುಳ್ಳಿಯ ಭಾಗವೊಂದನ್ನು ಒಸಡಿಗೆ ತಗಲುವಂತೆ ಇರಿಸಿ.

ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಅರ್ಧ ಚಮಚ ಉಪ್ಪು ಸೇರಿಸಿ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸುತ್ತಾ ಇರಿ. ಇದರಿಮ್ದ ಸೋಂಕು ಉಂಟಾಗಿದ್ದ ಒಸಡಿನಲ್ಲಿರುವ ಬ್ಯಾಕ್ಟೀರಿಯಾಗಳು ತೊಲಗಿ ಸೋಂಕು ಹಾಗೂ ನೋವು ಕಡಿಮೆಯಾಗುತ್ತದೆ.

ಒ೦ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿ ಅದರೆ ರಸಕ್ಕೆ, ಒ೦ದು ಅಥವಾ ಎರಡು ಹನಿಗಳಷ್ಟು ಲಿ೦ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ೦ದ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲು ನೋವಿನಿಂದ ಮುಕ್ತಿ ಪಡೆಯಬಹುದು. ಫಲಿತಾ೦ಶವು ಗಮನಾರ್ಹವಾಗಿ ಕ೦ಡುಬರುವ೦ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ೦ದು ಬಾರಿ ಕೈಗೊಳ್ಳಿರಿ.