ಹಲಸಿನ ಹಣ್ಣಿನ ಪಾಯಸ

ಬೇಕಾಗುವ ಸಾಮಗ್ರಿಗಳು
ಹಲಸಿನ ಹಣ್ಣು- ನಾಲ್ಕು ಬೌಲ್
ಕಡಲೆಬೇಳೆ – ಒಂದು ಬೌಲ್
ಬೆಲ್ಲ – ಒಂದು ಬೌಲ್
ತೆಂಗಿನ ಕಾಯಿ – ಮಧ್ಯಮ ಗಾತ್ರದ ಒಂದು
ಏಲಕ್ಕಿ ಪುಡಿ- ಚಿಟಿಕೆ
ಉಪ್ಪು- ಚಿಟಿಕೆ
ಮಾಡುವ ವಿಧಾನ
ಕಡಲೆಬೇಳೆಯನ್ನು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಕುಕ್ಕರ್ ನಲ್ಲಿ ಬೇಯಿಸಿದರೆ ಬೇಗನೆ ಕಡಲೆಬೇಳೆ ಬೇಯುತ್ತದೆ. ಮೂರು ವಿಷಿಲ್ ಬೇಕಾಗಬಹುದು. ಹಲಸಿನ ಹಣ್ಣನ್ನ ಸಣ್ಣಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.
ಹಲಸಿನ ಹಣ್ಣಿಗೆ ಬೆಲ್ಲ ಹಾಕಿ ಒಂದು ಕುದಿ ಬರುವವರೆಗೆ ಬೇಯಿಸಿಕೊಳ್ಳಿ. ಇದಕ್ಕೆ ತೆಂಗಿನ ಕಾಯಿಯನ್ನು ರುಬ್ಬಿಕೊಂಡು ಅದರ ಹಾಲನ್ನು ತೆಗೆದು ಸೇರಿಸಿ. ನಂತರ ಬೇಯಿಸಿಕೊಂಡ ಕಡಲೆಬೇಳೆ ಸೇರಿಸಿ, ಚಿಟಿಕೆ ಉಪ್ಪು ಹಾಕಿ ಕುದಿಸಿ.
ಪಾಯಸದ ಘಮಕ್ಕೆ ಏಲಕ್ಕಿ ಪುಡಿ ಹಾಕಿದರೆ ಬಿಸಿಬಿಸಿ ಹಲಸಿನ ಹಣ್ಣಿನ ಪಾಯಸ ಸವಿಯಲು ಸಿದ್ಧವಾಗುತ್ತದೆ. ಹಲಸಿನ ಹಣ್ಣಿನ ಸೇವನೆಯಿಂದ ಹಲವು ಲಾಭಗಳಿವೆ. ಸೀಸನಲ್ ಫ್ರೂಟ್ ಆಗಿರುವ ಇದು ವಿವಿಧ ಖಾದ್ಯಗಳ ತಯಾರಿಕೆಗೆ ಸಹಕಾರಿ. ಹಲಸಿನಲ್ಲಿ ಗಾಯ ಗುಣಮುಖಗೊಳಿಸುವ ಗುಣಗಳಿವೆ. ಚರ್ಮ, ಮೂಳೆ ಸೇರಿದಂತೆ ದೇಹದ ಹಲವು ಅಂಗಗಳಿಗೆ ಇದು ಹೆಚ್ಚಿನ ಆರೋಗ್ಯ ಒದಗಿಸುವುದಕ್ಕೆ ನೆರವಾಗುತ್ತದೆ.