ಹಲಸಿನಕಾಯಿ ಬಜ್ಜಿ

ಬೇಕಾಗುವ ಸಾಮಗ್ರಿ ಗಳು
ಬಲಿತಿರದ ಹಲಸಿನಕಾಯಿ ೧ ಅರ್ಧ ಕಪ್ ಕಡಲೆ ಹಿಟ್ಟು ೧ ಚಮಚ
ಖಾರದ ಪುಡಿ ೧/೪ ಚಮಚ
ಗರಂ ಮಸಾಲೆ ಪುಡಿ
೧/೪ ಚಮಚ ಜೀರಿಗೆ ಪುಡಿ
ರುಚಿಗೆ ತಕ್ಕ ಉಪ್ಪು ಸ್ವಲ್ಪ
ನೀರು
ಎಣ್ಣೆ

ಮಾಡುವ ವಿಧಾನ * ಬಲಿತಿರದ ಹಲಸಿನಕಾಯಿ ತೆಗೆದು ಅದರ ಸಿಪ್ಪೆ ಸುಲಿಯಬೇಕು

  • ನಂತರ ಚಿಕ್ಕದಾಗಿ , ತೆಳುವಾಗಿ ಕತ್ತರಿಸಿ
  • ಒಂದು ಬೌಲ್‌ನಲ್ಲಿ ಅರ್ಧ ಕಪ್ ಕಡ್ಲೆ ಹಿಟ್ಟು, ೧ ಚಮಚ ಖಾರದ ಪುಡಿ, ೧/೪ ಚಮಚ ಗರಂ ಪುಡಿ, ೧/೪ ಚಮಚ ಜೀರಿಗೆ ಪುಡಿ, ಸ್ವಲ್ಪ ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿ. * ಅದಕ್ಕೆ ಕತ್ತರಿಸಿದ ಹಲಸಿನಕಾಯಿ ಹಾಕಿ ಮಿಕ್ಸ್ ಮಾಡಿ.
  • ದಪ್ಪ ತಳವಿರುವ ಪಾತ್ರೆಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದಾಗ ಮಿಕ್ಸ್ ಮಾಡಿಟ್ಟ ಹಲಸಿನಕಾಯಿ ಹಾಕಿಮ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. * ನಂತರ ಎಣ್ಣೆಯಿಂದ ತೆಗೆದು ತಟ್ಟೆ ಅಥವಾ ಬೌಲ್‌ಗೆ ಹಾಕಿ.
  • ಬಿಸಿ- ಬಿಸಿಯಾದ ಹಲಸಿನಕಾಯಿ ಬಜ್ಜಿ ಅಥವಾ ಹಲಸಿನಕಾಯಿ ಪೋಡಿ ಸವಿಯಲು ರೆಡಿ