ಹಲವು ತಿಂಗಳ ಬಳಿಕ ಬಾಗಿಲು ತೆರೆದ ಶಿರಡಿ ದೇವಾಲಯ


ಶಿರಡಿ, ನ 16- ಕೊರೊನಾ ಸೋಂಕಿನ‌‌ ಹಿನ್ನೆಲೆಯಲ್ಲಿ ಹಲವು ತಿಂಗಳಿಂದ ಮುಚ್ಚಲ್ಟಟ್ಟಿದ್ದ ಇಲ್ಲಿನ ಸಾಯಿಬಾಬ ದೇಗುಲವನ್ನು ಇಂದು ತೆರೆಯಲಾಗಿದ್ದು ಭಕ್ತರು ಬಾಬಾ ದರ್ಶನ ಪಡೆದರು.
ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ‌ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಸೋಂಕು ತಡೆಗೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಇಂದಿನಿಂದ ಜಾರಿಗೆ ಬರುವಂತೆ ದೇವಾಲಯಗಳನ್ನು ತೆರೆಯಲಾಗಿದೆ. ಹಲವು ತಿಂಗಳ ಬಳಿಕ ಜನರು ದೇವಾಲಯಕ್ಕೆ ಭೇಟಿ ನೀಡಿ ದೀಪಾವಳಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು..


ದೇಶದಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಕ ಸ್ಥಾನದಲ್ಲಿದೆ.