ಹಲಕೋಡ: ಬೆಳೆ ಹಾನಿಯಿಂದ ಕಂಗಾಲಾದ ರೈತರು

ಚಿಂಚೋಳಿ,ಜು.27- ತಾಲೂಕಿನ ಹಲಕೋಡ ಗ್ರಾಮದ ರೈತರೂ ಅತಿವೃಷ್ಠಿಯಿಯಿಂದ ಕಂಗಾಲಾಗಿದ್ದಾರೆ ಸತತವಾಗಿ ಸುರಿದ ಮ¼ಯಿಂದಾಗಿ ತಮ್ಮ ತಮ್ಮ ಹೊಲದಲ್ಲಿ ಬೆಳೆದ ಹೆಸರು ,ಉದ್ದು, ಸೋಯಾ ಮತ್ತು ತೊಗರಿ, ಜೋಳ, ಹತ್ತಿ, ಬೆಳೆಗಳು ನೀರಿನಲ್ಲಿ ಮೂಳುಗಿ ಬೆಳೆಗಳು ನಾಶವಾಗಿವೆ.
ಹೊಲಗಳಲ್ಲಿ ನಿಂತ ನೀರಿನಿಂದ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಇದರಿಂದ ರೈತರು ಬಹಳಷ್ಟು ಕಂಗಲಾಗಿದ್ದಾರೆ. ರೈತರು ಬಿತ್ತನಿಗಾಗಿ ಬೀಜ ಮತ್ತು ಗೊಬ್ಬರ ಖರೀದಿಸಲು ಖಾಸಗಿ ಸಾಲ ಮತ್ತು ವಿವಿಧ ಸರ್ಕಾರಿ ಬ್ಯಾಂಕ್ ಗಳಿಂದ ಸಾಲ ತಂದು ತಮ್ಮ ಹೊಲದಲ್ಲಿ ಬೆಳೆದ ಬೆಳೆ ಕೈಗೆ ಸಿಗದೇ ಹಾಳಾಗಿದು,್ದ ಕೂಡಲೇ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಹಲಕೋಡ ಗ್ರಾಮದ ರೈತರಿಗೆ ಬೆಳೆ ಪರಿಹಾರ ನೀಡಬೇಕೆಂದು ಹಲಕೋಡ ಗ್ರಾಮದ ರೈತರು ಆಗ್ರಹಿಸಿದ್ದಾರೆ.