ಹಲಕೋಡ ಗ್ರಾಮದ ಸಮಸ್ಯೆ ಕೇಳುವವರಿಲ್ಲ?

ಚಿಂಚೋಳಿ,ಆ.1- ತಾಲೂಕಿನ ಹಲಕೋಡ ಗ್ರಾಮದಲ್ಲಿ ಸತತ ಸುರಿದ ಮಳೆಯಿಂದ ಗ್ರಾಮದ ಕೆಲ ಮನೆಗಳಿಗೆ ಚರಂಡಿ ಮತ್ತು ಮಳೆ ನೀರು ನುಗ್ಗಿ ಹಾಳಾಗುತ್ತಿವೆ, ಹಾವು ಚೇಳು ಕಿಟಗಳು ಜಂತುಗಳು ಮನೆಗಳಿಗೆ ಬರುತ್ತಿವೆ ಇದರಿಂದ ಗ್ರಾಮಸ್ಥರು ಭಯಭಿತರಾಗಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಗ್ರಾಮದ ಮನೆಯಲ್ಲಿ ನೀರು ನುಗಿದರು ಕೂಡ ಗ್ರಾಮದ ಜನರ ನೋವು ಕೇಳುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಮಳೆ ನೀರಿನಿಂದ ಸಂಪೂರ್ಣ ಗ್ರಾಮದ ಹೊಲಗಳಲ್ಲಿ ನೀರು ನಿಂತು ಉದ್ದು ಹೆಸರು ಸೋಯಾ ವಿವಿಧ ಬೆಳೆಗಳು ಕೂಡ ಸಂಪೂರ್ಣ ಹಾಳಾಗಿದ್ದು
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಲಕೋಡ ಗ್ರಾಮದಕ್ಕೆ ಭೇಟಿನೀಡ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಗ್ರಾಮದ ಮುಖಂಡರಾದ ಬೈನಪ್ಪ ಗುತ್ತೇದಾರ್, ಸಂಗು ಸ್ವಾಮಿ, ದಸರತ್ ಮುಧೋಳ್, ಅವರು ಆಗ್ರಹಿಸಿದ್ದಾರೆ.