(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.04: ತಮ್ಮ ಗ್ರಾಮದ ಸಮಸ್ಯೆಗಳ ನಿವಾರಣೆಗಾಗಿ ಮತದಾನ ಬಹಿಷ್ಕಾರ ಮಾಡುವುದಾಗಿ ಹೇಳುತ್ತಿರುವ ಗ್ರಾಮಗಳ ಜನತೆಯ ಮನವೊಲುಸಿ ಮತದಾನ ಮಾಡಿಸಲಿದೆಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಹೇಳಿದ್ದಾರೆ.
ಅವರಿಂದು ಸಂಜೆವಾಣಿ ಜೊತೆ ಮಾತನಾಡಿ. ತಾಲೂಕಿನ ಹಲಕುಂದಿ ಗ್ರಾಮದ ಜನತೆ ಗ್ರಾಮದಲ್ಲಿ ಸ್ಪಾಂಜ್ ಐರನ್ ಕಾರ್ಖಾನೆಗಳ ಧೂಳಿನ ಬಗ್ಗೆ ದೂರು ನೀಡಿದ್ದಾರೆ. ಅದರ ಬಗ್ಗದ ಕ್ರಮ ತೆಗೆದುಕೊಳ್ಳುವುದಾಗಿ ಮನವೊಲಿಸಿದೆ.
ಇನ್ನು ಸಂಡೂರು ತಾಲೂಕಿನ ಲಕ್ಕಲಹಳ್ಳಿ, ರಾಮಸಾಗರದ ಜನರು ಅರಣ್ಯ ಭೂಮಿ ಬಳಕೆ ಬಗ್ಗೆ ದೂರು ನೀಡಿದ್ದಾರೆ. ಇದು ಕಾನೂನು ವಿಷಯ ಯಾವ ರೀತಿ ಪರಿಷ್ಕಾರ ಮಾಡಬೇಕೆಂದು ಅವರಿಗೆ ತಿಳಿಸಿ ಮತದಾನ ಬಹಿಷ್ಕಾರ ಮಾಡದಂತೆ ಜಾಗೃತಿ ಮಾಡಿಸಲಿದೆ.
ಜಿಲ್ಲೆಯ ಯಾರೇ ಆಗಲಿ ಮತದಾನದ ಬಗ್ಗೆ ಆಕ್ಷೇಪಗಳು ಬಂದಲ್ಲಿ ತಕ್ಷಣ ಇರುವ ಸಮಸ್ಯೆ ಪರಿಹರಿಸಿ ಮತದಾನಮಾಡಿಸಲಿದೆಂದು ಹೇಳಿದರು.
ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ತುಂಗಭದ್ರ ಬಲದಂಡೆ ಕೆಳಮಟ್ಟದ ಕಾಲುವೆ ವ್ಯಾಪ್ತಿಯಲ್ಲಿ ಬೆಳೆದು ನಿಂತಿರಯವ ಭತ್ತದ ಬೆಳೆಗೆ ನೀರು ಹರಿಸುವ ಸಂಬಂಧಿಸಿ ದೂರು ನೀಡಿದ್ದು. ನೀರಾವರಿ ಸಲಹಾ ಸಮಿತಿ ಸಭೆ ನಿರ್ಧಾರದಂತೆ ನೀರು ಬಿಟ್ಟಿದೆ. ಬೆಳೆ ಉಳಿಸಲು ನೀರು ಬಿಡುವ ಕುರಿತು ತುಂಗಭದ್ರ ಮಂಡಳಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸೂಚಿಸಿದೆಂದರು. ಕಳೆದ ವರ್ಷ ಜಲಾಶಯದಲ್ಲಿ ಈ ಸಮಯದಲ್ಲಿ ಜಲಾಶಯದಲ್ಲಿ 16 ಟಿಎಂಸಿ ನೀರು ಇತ್ತು ಈ ವರ್ಷ 7 ಟಿಎಂಸಿ ನೀರು ಸಂಗ್ರಹವಿದೆ. ಕುಡಿಯುವ ನೀರು ಸಮಸ್ಯೆ ಆಗದಂತೆ ಬಳಕೆಗೆ ನಿರ್ಧರಿಸಿದೆಂದು ಹೇಳಿದರು.