ಹಲಕುಂದಿ ಬೈಪಾಸ್ ಬಳಿ ಕಾರು ಟಾಟಾ ಎಸ್ ಡಿಕ್ಕಿ  ಮಿಂಚೇರಿಯ ಇಬ್ಬರು ಸಾವು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ :ಅ,21- ತಾಲೂಕಿನ ಹಲಕುಂದಿ ಬಳಿ ಹೊಸ ಬೈಪಾಸ್ ರಸ್ತೆ ಬಳಿ ನಿನ್ನೆ ಸಂಜೆ ಕಾರು ಹಾಗೂ ಟಾಟಾ ಎಸ್ ನಡುವೆ  ಸಂಭವಿಸಿದ ಅಪಘಾತದಲ್ಲಿ ಮಿಂಚೇರಿ ಗ್ರಾಮದ ಇಬ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಹಲಕುಂದಿ ಮತ್ತು ಮೀಂಚೇರಿ ಮದ್ಯೆ ಹಾದು ಬೆಂಗಳೂರುಕಡೆ ತೆರಳುವ ನೂತನ ಬೈ ಪಾಸ್  ಹೆದ್ದಾರಿಯಲ್ಲಿ ಹಲಕುಂದಿ‌ಕಡೆಯಿಂದ ಮಿಂಚೇರಿಗೆ ಬರುತ್ತಿದ್ದ ಟಾಟಾ ಏಸ್ ಕೆ.ಎ.34 ಬಿ.0301  ವಾಹನಕ್ಕೆ.  ಬಳ್ಳಾರಿ‌ಕಡೆಯಿಂದ ಬೆಂಗಳೂರು ಕಡೆ ಹೊರಟಿದ್ದ ಕಾರು ವೇಗವಾಗಿ ಬಂದು ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಗಾಡಿಗೆ ಗುದ್ದಿದ್ದರಿಂದ ಅದು ಪಲ್ಟಿಯಾಗಿ ಅದರಲ್ಲಿದ್ದ
ಮಿಂಚೇರಿಯ ಕಂಪ್ಲಿ ಹುಸೇನ್ (55) ಮತ್ತು ಮುಸ್ಕಿಲ್(35)   ಸಾವನ್ನಪ್ಪಿದ್ದಾರೆ. ಇವರು ಹಳೇ ಟೈರ್ ಗಳನ್ನು ರಿ ಬಟನ್ ಮಾಡಿಸುವುದು ಮೊದಲಾದ ಕೆಲಸ ಮಾಡಿಕೊಂಡಿದ್ದರು.
ಅಪಘಾತಕ್ಕೆ ಕಾರಣವಾದ ಎಂ.ಹೆಚ್. 13 ಡಿ.ವೈ, 7877 ಕಾರಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಮಹಂತೇಶ್ ಹಾಗು ಮತ್ತೊಬ್ಬರು ಗಾಯಗೊಂಡಿದ್ದಾರೆ.
ಬಳ್ಳಾರಿ ಗ್ರಾಮೀಣ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ಪರಿಶೀಲನೆ ನಡೆಸಿದೆಂದು ಠಾಣೆಯ ಪಿಐ ಸತೀಶ್ ತಿಳಿಸಿದ್ದಾರೆ.