ಹಲಕುಂದಿ ಕ್ಲಸ್ಟರ್ ನ ಪ್ರತಿಭಾ ಕಾರಂಜಿ


ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.02: ಕ್ಲಸ್ಟರ್ ನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ ವಿದ್ಯಾರ್ಥಿಗಳು ವರ್ಷಕ್ಕೊಮ್ಮೆ ಒಂದು ಕಡೆ ಸೇರಿ ತಮ್ಮ ಪ್ರತಿಭೆಯನ್ನು ಹಂಚಿಕೊಳ್ಳುವುದರಿಂದ ವಿಶೇಷ ಅನುಭವ ಉಂಟಾಗುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಹಲಕುಂದಿ ಶ್ರೀ ವೀರಭದ್ರೇಶ್ವರ ಮಠದಲ್ಲಿ ಹಲಕುಂದಿ ಕ್ಲಸ್ಟರ್ ನ ಪ್ರತಿಭಾಕಾರಂಜಿ ಹಾಗೂ ಕಲೋತ್ಸವದಲ್ಲಿ ವಿಜೇತ ಮಕ್ಕಳಿಗೆ ಹಮ್ಮಿಕೊಂಡಿದ್ದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಬಹುಮಾನ ವಿತರಣೆ ಮಾಡಿ ಮಾತನಾಡಿ ಮಕ್ಕಳು ಕಂಠಪಾಠ, ಧಾರ್ಮಿಕ ಪಠಣ, ಪ್ರಬಂಧ, ಏಕಪಾತ್ರ ಅಭಿನಯ,ಛದ್ಮವೇಶ,ಜಾನಪದ ಗೀತಾಗಾಯನ,ಕವಾಲಿ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರು ತಾಲೂಕು ಮಟ್ಟದಲ್ಲಿ ಕೂಡ ಜಯಗಳಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಬೇಕೆಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಯಿಮೂರ್ ರಹಮಾನ್ ,ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಂಪನಗೌಡ,ಉಪಾಧ್ಯಕ್ಷ ಕೆ.ಹನುಮಂತಪ್ಪ, ಎನ್.ಪಿ.ಎಸ್. ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ತಿಪ್ಪಾರೆಡ್ಡಿ,ಇ.ಸಿ.ಒಗಳಾದ ಹಿರೇಮಠ್, ಸಿ.ಡಿ.ಗೂಳಪ್ಪ,ಹಲಕುಂದಿ ಕ್ಲಸ್ಟರ್ ಸಿ.ಆರ್. ಪಿ.ಶ್ರೀನಿವಾಸ ರೆಡ್ಡಿ,ಸಿ.ಆರ್. ಪಿ.ಕೆಂಚಪ್ಪ,ಸಿ.ಆರ್. ಮಹಂತೇಶ, ಹಲಕುಂದಿ ಸರ್ಕಾರಿ ಶಾಲೆಯ ಮುಖ್ಯ ಗುರು ಜ್ಯೋತಿ,ಚರಕುಂಟೆ ಶಾಲೆಯ ಬಡ್ತಿ ಮುಖ್ಯ ಗುರು ಓಬಳೇಶಪ್ಪ,ಹೊನ್ನಳ್ಳಿ ತಾಂಡ ಶಾಲೆಯ ಮುಖ್ಯ ಗುರು ಮಾರೆಣ್ಣ,ಹೊನ್ಞಳ್ಳಿ ಶಾಲೆಯ ಮುಖ್ಯ ಗುರು ಪಾರ್ವತಿ, ಸಂಜೀವರಾಯನಕೋಟೆ ಶಾಲೆಯ ಮುಖ್ಯ ಗುರು ರವಿಚೇಳ್ಳಗುರ್ಕಿ, ಮಿಂಚೇರಿ ಶಾಲೆಯ ಮುಖ್ಯ ಗುರು ದೌಲತ್ ಬಾನು,ನಂದಕಿಶೋರ್,ಮಿಂಚೇರಿ ಉರ್ದು ಶಾಲೆಯ ಮುಖ್ಯ ಗುರು ಬಸವಪ್ರಕಾಶ್,ಗಾಂಧೀಜಿ ಪ್ರೌಢ ಶಾಲೆಯ ಮುಖ್ಯ ಗುರು ವ್ಯಾಸರಾವ್,ನಾಗರಾಜ್, ಹಲಕುಂದಿ ಸ.ಪ್ರೌಢ ಶಾಲೆಯ ಮುಖ್ಯ ಗುರು ತಿಪ್ಪೇಸ್ವಾಮಿ,ಕಿಡ್ಸ್ ಪಬ್ಲಿಕ್ ಶಾಲೆ ,ಪ್ರಭು ಸನ್ನಿಧಿ ಶಾಲೆ ಮುಖ್ಯ ಗುರು, ವೀರಭದ್ರೇಶ್ವರ ಶಾಲೆಯ ಮುಖ್ಯ ಗುರು, ವಿ.ಬಿ.ಎಸ್. ಮಠ ಸರ್ಕಾರಿ ಶಾಲೆಯ ಮುಖ್ಯ ಗುರು ಮೀನಾಕ್ಷಿ ಖಾಳೆ,ಯು.ನಾಗಪ್ಪ,ವಿ.ಬಸವರಾಜ,ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

One attachment • Scanned by Gmail