ಹಲಕುಂದಿ ಅಮೃತ ಸರೋವರ ಯೋಜನೆ ಕಾಮಗಾರಿ ಪರಿಶೀಲನೆ.


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.18:  ತಾಲೂಕಿನ  ಹಲಕುಂದಿ ಗ್ರಾಮ ಪಂಚಾಯಿತಿಗೆ ನರೇಗಾ ಯೋಜನೆಯಡಿ ಕೈಗೊಂಡ ಅಮೃತ ಸರೋವರ ಕಾಮಗಾರಿ ಮತ್ತು ಎನ್ ಆರ್ ಎಲ್ ಎಂ ಶೆಡ್ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿಯ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಬಾರಿಕೇರ್,  ನರೇಗಾ ಸಹಾಯಕ ನಿರ್ದೇಶಕ ಬಸವರಾಜ್, ಗ್ರಾಮ ಪಂಚಾಯತಿ ಅಧ್ಯಕ್ಷ ಹೆಚ್.ಆರ್. ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷೆ ಮುಸ್ತಮ್ಮ, ಸದಸ್ಯರುಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಎಂ.ಪ್ರಭಾಕರ್, ಎಡಿಪಿಸಿ ಅಂಬರೀಶ್, ಡಿಎಂಐಎಸ್ ಶಿವ ಪ್ರಸಾದ್,  ಟಿಐಎಂಎಸ್ ಅಧಿಕಾರಿಗಳು,  ನರೇಗಾ ತಾಂತ್ರಿಕ ಮತ್ತು ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.