ಹಲಕುಂದಿಯಲ್ಲಿ ನಾಗೇಂದ್ರ ಭರ್ಜರಿ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ತಾಲೂಕಿನ ಹಲಕುಂದಿ ಮೊದಲಾದ ಗ್ರಾಮಗಳಲ್ಲಿ ಇಂದು ಗ್ರಾಮೀಣ ಕ್ಷೇತ್ರದ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೆಂದ್ರ ಅವರು ಪಕ್ಷದ ಪ್ರಚಾರ ಸಮಿತಿಯ ಸಂಚಾಲಕ ಅಲ್ಲಂ ಪ್ರಶಾಂತ್ ಮೂದಲಾದ ಮುಖಂಡರೊಂದಿಗೆ ತೆರೆದ ವಾಹನದಲ್ಲಿ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಈ‌ ಶೋಗೆ ಜನತೆ ಸ್ವಯಂ ಪ್ರೇರಣೆಯಿಂದ ಸೇರಿದ್ದನ್ನು ನೋಡಿ  ಬಿಜೆಪಿ ಬೆಂಬಲಿಗರಿಗೆ ತಮ್ಮ ಅಭ್ಯರ್ಥಿ ಗೆಲುವಿನ ಬಗ್ಗೆ ಅನುಮಾನ‌ ವ್ಯಕ್ತಪಡಿಸಿದರಂತೆ.
ನಾಗೇಂದ್ರ ಮೊದಲೇ ಹೇಳಿದ್ದಾನೆ ಜನರ, ಪಕ್ಷದ ಮುಖಂಡರ, ಕಾರ್ಯಕರ್ತರ ಬೆಂಬಲ ಇರುವ ವರಗೆ ನನ್ನನ್ನು  ಆ ದೇವರೊಬ್ಬರು ಬಿಟ್ಟರೆ ಯಾರಿಂದಲೂ ಸೋಲಿಸಲು ಆಗಲ್ಲ ಎಂದು. ಹೀಗಿರುವಾಗ ನಮ್ಮ ಪಕ್ಷದ ಗತಿ ಏನು ಎಂಬ ಮಾತುಗಳು ಕೇಳಿ ಬಂದವು.
ನಾನು ಸದಾ ನಿಮ್ಮ ಸೇವೆಯಲ್ಲಿರುವೆ. ಬೇರೆಯವರಂತೆ ಪಿ.ಎ.ಗಳ ಸಾಮ್ರಾಜ್ಯದ ಮೂಲಕ‌ ನಿಮ್ಮನ್ನು ಕಾಣಲ್ಲ ಸರಿ ರಾತ್ರಿಗೂ ಪೋನ್ ಮಾಡಿ ನಿಮಗೆ ಸ್ಪಂದಿಸುವೆ ಎಂದು ನಾಗೇಂದ್ರ ಹೇಳಿದಾಗ ಕರತಾಡನ ಮುಗಿಲು ಮುಟ್ಟಿತ್ತು.
ಅಲ್ಲಂ ಪ್ರಶಾಂತ್ ಅವರು ಮಾತನಾಡಿ, ಇಂತಹ ನಾಯಕನನ್ನು ಬಿಟ್ಟು ಬೇರೆಯವರ ಆಯ್ಕೆ ಬಗ್ಗೆ ನೀವು ಆಲೋಚನೆ  ಸಹ‌ ಮಾಡಬೇಡಿ ಎಂದರು. ಪಕ್ಷದ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.