ಹಲಕುಂದಿಯಲ್ಲಿ ಗ್ರಾಮ ನೈರ್ಮಲ್ಯ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.19: ತಾಲೂಕಿನ  ಹಲಕುಂದಿ ಗ್ರಾಮ ಪಂಚಾಯಿತಿಯಲ್ಲಿ ಈ ದಿನ ಸ್ವಚ್ಛ ಬುಧವಾರದ ಅಂಗವಾಗಿ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ಪ್ರಮುಖ ಬೀದಿಗಳು, ಅಂಗನವಾಡಿ  ಕೇಂದ್ರ, ಕುಡಿಯುವ ನೀರಿನ ಗುಮ್ಮಿಗಳ  ಸುತ್ತಮುತ್ತ ಸ್ವಚ್ಛತೆಯನ್ನು ಮಾಡಿ ಗ್ರಾಮದ ನೈರ್ಮಲ್ಯವನ್ನು ಕಾಪಾಡುವ ಕಾರ್ಯ ನಡೆಯಿತಿ.
ಗ್ರಾಮ ಪಂಚಾಯಿತಿ  ಅಧ್ಯಕ್ಷ ಎಚ್.ಆರ್. ಮಲ್ಲಿಕಾರ್ಜುನ ಗೌಡ,  ಉಪಾಧ್ಯಕ್ಷರು,  ಸದಸ್ಯರು ಮತ್ತು  ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ. ಪ್ರಭಾಕರ, ಕಾರ್ಯದರ್ಶಿ ಎಂ. ರುದ್ರಪ್ಪ, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದವರು, ನರೇಗಾ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿಯ  ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.