ಹಲಕುಂದಿಯಲ್ಲಿ‌ ಪರಿಸರ ದಿನಾಚರಣೆ

ಬಳ್ಳಾರಿ ಜೂ 06 : ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ನಿನ್ನೆ ವಿಶ್ವ ಪರಿಸರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಆರ್. ಮಲ್ಲಿಕಾರ್ಜುನ ಗೌಡ ಅವರು ಗ್ರಾಮ ಪಂಚಾಯಿತಿ ಆವರಣ,ಹೊನ್ನಳ್ಳಿ ರಸ್ತೆ, ಆಶ್ರಯ ಕಾಲೋನಿ, ಗಾಂಧೀಜಿ ಪ್ರೌಢಶಾಲೆ ಹತ್ತಿರ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
ಇಂದಿನ ಪರಿಸ್ಥಿತಿಯಲ್ಲಿ ಸಸಿಗಳನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿಯ ಸದಸ್ಯರಾದ ಕೇಶವ, ಬುಡೇನ್ ಸಾಬ್, ನಾಗರಾಜ, ಸರ್ವ ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎ. ಕೆ. ದುರ್ಗಪ್ಪ ಕಾರ್ಯದರ್ಶಿ ಎಮ್. ರುದ್ರಪ್ಪ ಗಾಂಧೀಜಿ ಪ್ರೌಢಶಾಲೆಯ ನಿರ್ದೇಶಕ ತಿಮ್ಮನಗೌಡ ಮುಖ್ಯಗುರು ವ್ಯಾಸರಾಯ ಶಿಕ್ಷಕ ನಾಗರಾಜ್ ಗ್ರಾಮದ ಮುಖಂಡರಾದ ಹೊನ್ನೂರ್ ಸ್ವಾಮಿ, ಶಿವು, ಬೇವಿನಹಳ್ಳಿ ಹೊನ್ನೂರ್ ಸ್ವಾಮಿ, ವೆಂಕಟೇಶ್, ರಾಘವೇಂದ್ರ, ಸೋಮನಗೌಡ, ಅಂಜಿನಪ್ಪ, ಕೆ ಸಿದ್ದಪ್ಪ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.