
ಕಲಬುರಗಿ,ಆ.17-ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಹಲಕರ್ಟಿ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹುಬ್ಬಳ್ಳಿಯ ಸಿದ್ಧಾರೂಢರ ಮಹಾಪುರಾಣ ಆ.17 ರಿಂದ ಸೆ.4ರವರೆಗೆ ಒಂದು ತಿಂಗಳವರೆಗೆ ಪ್ರತಿ ದಿನ ಸಂಜೆ 8 ಗಂಟೆಗೆ ಜರುಗುವುದು.
ಹಲಕರ್ಟಿಯ ಕಟ್ಟಿಮನಿ ಹಿರೇಮಠದ ಅಭಿನವ ಮುನಿ ಶಿವಾಚಾರ್ಯರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಾಡಿನ ಹೆಸರಾಂತ ಪುರಾಣ ಪ್ರವಚನಕಾರರಾದ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರೀಗಳಿಂದ ಪುರಾಣ, ವೀರಭದ್ರಯ್ಯ ಗವಾಯಿಗಳು ಕಟ್ಟಿಸಂಗಾವಿ ಅವರಿಂದ ಸಂಗೀತ , ಬಸವರಾಜ ಚಲಗೇರಿ ಅವರ ತಬಲಾ ವಾದನದೊಂದಿಗೆ ಪುರಾಣ ಕಾರ್ಯಕ್ರಮ ಸಾಗುವುದು.
ಶ್ರಾವಣ ಮಾಸದಲ್ಲಿ ಬರುವ ಮಂಗಳವಾರಗಳಂದು ರಾತ್ರಿ 11.00 ಗಂಟೆಗೆ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಜರುಗುವುದು ಮತ್ತು ಮೂರನೇ ಮಂಗಳವಾರದಂದು ವೀರಭದ್ರೇಶ್ವರ ಸ್ವಾಮಿಯ ಮೂಲ ಮೂರ್ತಿಗೆ ಮಹಾರುದ್ರಾಭಿಷೇಕ ಹಾಗೂ ವಿಶೇಷ ಅಲಂಕಾರ ಮಹಾಮಂಗಳಾರುತಿ ಮತ್ತು ಶ್ರಾವಣ ಮಾಸದ ಪಯರ್ಂತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವುದು ಎಂದು ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನದ ಕಮಿಟಿ ತಿಳಿಸಿದೆ. ಆದ ಕಾರಣ ಭಕ್ತಾಧಿಗಳು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.