ಹಲಕರ್ಟಿ: ನ.24ರಂದು ಶ್ರೀವೀರಭದ್ರಶ್ವೇರ ಭವ್ಯ ರಥೋತ್ಸವ

??????

ವಾಡಿ:ನ.19: ಅಪಾರ ಭಕ್ತರ ಸಮೂಹ ಹೊಂದಿರುವ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದ ಶ್ರೀವೀರಭದ್ರಶ್ವೇರ ಜಾತ್ರಾ ಮಹೋತ್ಸವವನ್ನು ಇದೆ ನವೆಂಬರ್ 19.ರಂದು ಶುಕ್ರವಾರ ಪ್ರಾರಂಭಗೊಳ್ಳಲಿದ್ದು, ಶ್ರೀಮಠದ ಪೀಠಾಧಿಪತಿ ಶ್ರೀಮುನಿಂದ್ರ ಶಿವಾಚಾರ್ಯ ಅವರ ಅಧ್ಯಕ್ಷತೆಯಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀವೀರಭದ್ರಶ್ವೇರ ಚಾರಿಟೇಬಲ್ ಟ್ರಸ್ಟ್‍ನ ಕಾರ್ಯದರ್ಶಿ ಚಂದ್ರಕಾಂತ ಮೇಲಿನಮನಿ ತಿಳಿಸಿದ್ದಾರೆ.

ಶ್ರೀಮಠದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಕಟ್ಟಿಮನಿ ಹಿರೇಮಠದ ಪೀಠಾಧಿಪತಿ ಅಭಿನವ ಶ್ರೀಮುನಿಂದ್ರ ಶಿವಾಚಾರ್ಯ, ಈ ಬಾರಿ ಜಾತ್ರಾ ಮಹೋತ್ಸವವನ್ನು ವಿಜೃಭಂಣೆಯಿಂದ ಹಮ್ಮಿಕೊಳ್ಳಲು ಭಕ್ತರು ತಿರ್ಮಾನಿಸಿದ್ದಾರೆ. ಜಾತ್ರೆಯಲ್ಲಿ ಪಾಲ್ಗೋಳ್ಳುವ ಭಕ್ತರು ಕಡ್ಡಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸರಕಾರದ ನಿಯಮಗಳನ್ನು ಭಕ್ತರು ಪಾಲಿಸಬೇಕು ಎಂದು ತಿಳಿಸಿದ್ದಾರೆ.

ನ.19.ರಂದು ಶುಕ್ರವಾರ ರಾತ್ರಿ 10.ಗಂಟೆಗೆ ಸಕಲ ವ್ಯಾದಗಳೊಂದಿಗೆ ಚಿಕ್ಕವೀರಪ್ಪನವರ ಮನೆಯಿಂದ ಮೈಲಾರಲಿಂಗನ ದೇವಸ್ಥಾನಕ್ಕೆ ತೆರಳಿ ಅಂಬಲಿ ಬಂಡಿ ತರುವುದು. 20.ರಂದು ಶನಿವಾರ ಸಾಯಂಕಾಲ ಜೋಡ ಪಲ್ಲಕಿ ಉತ್ಸವದೊಂದಿಗೆ ರುದ್ರ ಬಸವಣ್ಣನಿಗೆ ತೆರಳುವುದು ಮತ್ತು ಚೌಡಮ್ಮನಿಗೆ ಗಂಗಸ್ಥಾನ ಮಾಡಿಸುವುದು. 21.ರಂದು ರವಿವಾರ ಪಲ್ಲಕಿ ಸೇವೆ ಹಾಗೂ ಶೇಟ್ಟಿ ಅವರ ಮನೆಗೆ ಹೊಗುವುದು. 22.ರಂದು ಸೋಮವಾರ ರಾತ್ರಿ ಮೈಲಾರಲಿಂಗ ದೇವಸ್ಥಾನದಲ್ಲಿ ಕಳ್ಳಸರಪಳಿ ಹರಿಯುವುದು. 23.ರಂದು ಮಂಗಳವಾರ 23.ರಂದು ಅಗ್ನಿ ಪ್ರವೇಶ, ಮೈಲಾರಲಿಂಗ ದೇವಸ್ಥಾನದಲ್ಲಿ ಒಗ್ಗಯ್ಯಗಳಿಗೆ ವಿಶೇಷ ಸನ್ಮಾನ, ದೈವ ಸರಪಳಿ ಹಾಗೂ ಪುರವಂತರ ಸೇವೆ ಸೇವೆ ಸೇರಿದಂತೆ ವಿವಿಧ ಸಾಂಪ್ರದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

24ರಂದು ಭವ್ಯ ರಥೋತ್ಸವ: 24.ರಂದು ಬುಧವಾರ 4.ಗಂಟೆಗೆ ಚೌವಡಶ್ವೇರಿ ದೇವಿ ಆಡುವಿಕೆ, ಶ್ರೀಮಠದಲ್ಲಿ ಮುತೈದಿಯರಿಗೆ ಉಡಿ ತುಂಬುವ ಸಂಪ್ರದಾಯ, ಶಶಿಧರ ದೇಶಮುಖ ಮನೆಯಿಂದ ಕುಂಭ ಮೇಳ ತಂದ ಬಳಿಕ ಸಾಯಂಕಾಲ 6.ಗಂಟೆಗೆ ಭವ್ಯ ರಥೋತ್ಸವ ಸಂಭ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಥಾತ್ ನಾಟಕ: ಜಾತ್ರಾ ಮಹೋತ್ಸವ ನಿಮಿತ್ತವಾಗಿ ಮೂರು ದಿನಗಳ ಕಾಲ ವಿರಚಿತ ಸುಂದರ ಸಾಮಾಜಿಕ ನಾಟಕ ಹಮ್ಮಿಕೊಳ್ಳಲಾಗಿದೆ. “ಧರ್ಮವಂತರ ಮನೆತನ ವಿಧಿಯಾಟ ಬಲ್ಲವರಾರು” ಅರ್ಥಾತ ಸಾಮಾಜಿಕ ನಾಟಕ ನಡೆಯಲಿದೆ. ಗ್ರಾಮದ ಮುಖಂಡರಾದ ರಾಜುಗೌಡ ಪಾಟೀಲ, ರಾಘವೇದ್ರ ಅಲ್ಲಿಪೂರಕರ್, ವೀರೇಂದ್ರ ಜೀವಣಗಿ, ರವಿಕುಮಾರ ಸಂಗಶೆಟ್ಟಿ, ಬಸವರಾಜ ಲೋಕನಳ್ಳಿ, ಮಲ್ಲಿಕಾರ್ಜುನ ಕೊಲಕುಂದಿ, ವೀರೇಶ ಕಪ್ಪುರ, ಅಶೋಕ ಚಕ್ರವರ್ತಿ, ದತ್ತು ಬುಕ್ಕಾ ಇದ್ದರು.