
ವಾಡಿ: ಆ. 8: ಗ್ರಾಮದ ಮನೆಗಳ ಚರಂಡಿ ನೀರು ಅದರ ಮಧ್ಯೆಯೇ ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಸಲಾಗಿದ್ದು, ಜನರಿಗೆ ಚರಂಡಿ ಮಿಶ್ರಿತ ಕುಡಿಯುವ ನೀರು ಪೂರೈಕೆ ಆಗುತ್ತಿದ್ದು ಈ ಕುರಿತು ಪಿಡಿಓ ಗಮನಕ್ಕೆ ತರಲಾಗಿದ್ದರು, ಯಾವುದೇ ಪ್ರಯೋಜನವಾಗಿಲ್ಲ ಎಂದು ಹಲಕಟ್ಟಾ ಗ್ರಾ.ಪಂ ಸದಸ್ಯ ಸೈಯ್ಯದ ಇಮ್ತಿಯಾಜ ಪಟೇಲ ಗಂಭೀರವಾಗಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಚಿತ್ತಾಪೂರ ತಾಲ್ಲೂಕಿನ ಹಲಕಟ್ಟಾ ಗ್ರಾಮದ ವಾರ್ಡ ನ-ಂ3 ರಲ್ಲಿ ಹಾದು ಹೋಗಿರುª Àಬಹುತೇಕ ಕುಡಿಯುವ ಪೈಪ್‍ಲೈನ್‍ಗಳು ಚರಂಡಿ ನೀರಿನಲ್ಲಿವೆ. ಇದರಿಂದ ಕಬ್ಬಿಣ್ಣದ ಪೈಪ್‍ಗಳು ತುಕ್ಕು ಹಿಡಿದು ಸಾರ್ವಜನಿಕ ಹಣ ಪೋಲಾಗುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಕಾರಣ ಕೂಡಾ ಆಗುತ್ತಿದೆ. ಜನರಿಗೂ ಶುದ್ದ ಕುಡಿಯುವ ನೀರು ದೊರೆಯುತ್ತಿಲ್ಲ. ಜನರಿಂದ ಆರಿಸಿ ಬಂದ ನಾನು ಜನರ ಸಮಸ್ಯೆ ಅಧಿಕಾರಿ ಗಮನಕ್ಕೆ ತಂದರೆ ಕ್ಯಾರೇ ಅನ್ನುತ್ತಿಲ್ಲ. ಕಳೆದ 15 ತಿಂಳಿನಿಂದ ಸಾಮಾನ್ಯ ಸಭೆ ಕೂಡಾ ಹಮ್ಮಿಕೊಂಡಿಲ್ಲ , ಅಲ್ಲದೆ ಪಂಚಾಯತಿಗೆ ಬರುವುದೇ ಅಪರೂಪವಾಗಿದೆ, ಪಿಡಿಓ ಬೇಜವ್ದಾರಿ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂದು ಸೈಯ್ಯದ ಇಮ್ತಿಯಾಜ ಪಟೇಲ ಕಳವಳ ವ್ಯಕ್ತಪಡಿಸಿದರು.