ಹರ ತಲೆ ಕೆರೆ ಒತ್ತುವರಿ ತೆರವು

ಸಂಜೆವಾಣಿ ವಾರ್ತೆ
ನಂಜನಗೂಡು: ಫೆ.27:- ತಾಲೂಕಿನ ಕಸಬಾ ಹೋಬಳಿ ಹರ ತಲೆ ಗ್ರಾಮದ ಸರ್ವೇ ನಂಬರ್ 344ರ 17 ಎಕರೆ ಸರ್ಕಾರಿ ಕೆರೆಯ ಎನ್ನು ಒತ್ತುವರಿ ಆಗಿದ್ದನ್ನು ತಾಸಿಲ್ದಾರ್ ಶಿವಕುಮಾರ್ ಕಾಸ್ನೂರ್ ನೇತೃತ್ವದಲ್ಲಿ ತೆರವುಗೊಳಿಸಿದರು.
ಹರತಲೆ ಗ್ರಾಮದಲ್ಲಿರುವ ಕೆರೆಯನ್ನು ಅನ್ಯರು ಸುಮಾರು ವರ್ಷಗಳಿಂದ ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿತ್ತು ಇವರಿಗೆ ತೆರವುಗೊಳಿಸುವಂತೆ ಅನೇಕ ಬಾರಿ ಸೂಚನೆ ನೀಡಿದ್ದು ಇದಕ್ಕೆ ಬೆಲೆ ನೀಡದೆ ಅದೇ ರೀತಿಯ ಮುಂದುವರಿಸಿಕೊಂಡು ಬರುತ್ತಿದ್ದರು ಇಂದು ತಸಿಲ್ದಾರ್ ನೇತೃತ್ವದಲ್ಲಿ ಸ್ಥಳಕ್ಕೆ ಅಧಿಕಾರಿಗಳ ಸಮೇತ ಮತ್ತು ಪೆÇಲೀಸ್ ಅಧಿಕಾರಿಗಳ ಜೊತೆ ಕೆರೆಯ ಒತ್ತುವರಿ ಸ್ಥಳಕ್ಕೆ ಬಂದು ಬೆಳಗ್ಗೆಯಿಂದ ಸಂಜೆವರೆಗೂ ಸ್ಥಳದಲ್ಲೇ ಬೀಡುಬಿಟ್ಟಿ ಸರ್ವೇ ಮಾಡಿ ಅನ್ಯರ ಪಾಲಾಗಿದ್ದ 17 ಎಕ್ಕರೆ ಒತ್ತುವರಿ ಜಾಗವನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರಾದ ಹರೀಶ್ ಎಇಇ ಸುಹಾಸ್ ತಾಲೂಕು ಭೂಮಾಪಕರಾದ ಕೆಂಪಣ್ಣ ಮಂಟೆಲಿಂಗು ಸೇರಿದಂತೆ ಇತರರು ಇದ್ದರು.