ಹರ ಜಾತ್ರಾ ಮಹೋತ್ಸವ ಅಧ್ಯಕ್ಷರಾಗಿ ಬಾವಿ ಬೆಟ್ಟಪ್ಪ


ದಾವಣಗೆರೆ ನ.೧೪.ಪ್ರತಿ ವರ್ಷದಂತೆ ಜನವರಿ 14 ಮತ್ತು 15ರಂದು   ಹರಿಹರ ಪಂಚಮಸಾಲಿ ಜಗದ್ಗುರು ಪೀಠದಲ್ಲಿ  ಆಚರಿಸುವ   ಹರ ಜಾತ್ರಾ ಮಹೋತ್ಸವ-2022ಕುರಿತು ಜಗದ್ಗುರು  ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ರಾಜ್ಯಾಧ್ಯಕ್ಷರಾದ  ಬಿ.ನಾಗನಗೌಡರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ  ಸಭೆ ಜರುಗಿತು.ಹರ ಜಾತ್ರಾ ಮಹೋತ್ಸವ-2022 ರ ಅಧ್ಯಕ್ಷರಾಗಿ  ಬಾವಿ ಬೆಟ್ಟಪ್ಪನವರನ್ನು ಆಯ್ಕೆ ಮಾಡಲಾಯಿತು,ಇದೇ ಸಂಧರ್ಭದಲ್ಲಿ ವಿವಿಧ ಉಪಸಮಿತಿಗಳ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು.