“ಹರ ಘರ ತಿರಂಗಾ” ಅಭಿಯಾನ ಜಾಗೃತಿ

ಚಿಂಚೋಳಿ,ಜು.25- ಇದೇ ಅಗಸ್ಟ 15ರಂದು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ರಾಷ್ರ್ಟದಾದ್ಯಂತ “ಹರ ಘರ ತಿರಂಗಾ” ಅಭಿಯಾನಕ್ಕೆ ತಾಲೂಕಿನ ರಾಣಾಪೂರ ಗ್ರಾಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ ಹಾಗೂ ಚಿಂಚೋಳಿ ಮಂಡಲ ಪ್ರಭಾರಿ ರಾಘವೇಂದ್ರ ಕುಲಕರ್ಣಿ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂತೋಷ ಗಡಂತಿ ಬರುವ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ನಿಮಿತ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಆಗಸ್ಟ 13ರಿಂದ15 ರವರೆಗೆ ರಾಜ್ಯದ ಪ್ರತಿಯೊಂದು ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು, ಅಲ್ಲದೆ ಚಿಂಚೋಳಿ ಮಂಡಲದ ಪ್ರತಿಯೊಂದು ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಹೇಳಿದರು.
ರಾಘವೇಂದ್ರ ಕುಲಕರ್ಣಿ ಮಾತನಾಡಿ ಇಡಿ ರಾಷ್ಟ್ರದಲ್ಲಿ 100 ಕೋಟಿ ಮನೆಗಳ ಮೇಲೆ ಧ್ವಜಾರೋಹಣ ನೆರವೇರಿಲಿದೆ ಚಿಂಚೋಳಿಯಲ್ಲಿಯು ಕೂಡ ಯಶಸ್ವಿಗೊಳಿಸಲು ತಿಳಿಸಿದರು, ಇ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಕೆಎ???ಫ ನಿರ್ಧೆಶಕರಾದ ದಿವಾಕರ ಮಹಾರಾಜ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಇಟಗಿ, ಸುಧೀರ ಜಹಾಗಿರದಾರ, ಗೌಡಪ್ಪಗೌಡ ಪಾಟೀಲ,ಮಲ್ಲಣ್ಣ ಜಮಾದಾರ, ರಾಮರೆಡ್ಡಿ ಪಾಟೀಲ, ಜಾನುಸಿಂಗ್, ಕಾಶಿನಾಥ ಅರಕಿ, ಝರಣಪ್ಪ ಜಮಾದರ, ಗ್ರಾಮ ಪಂಚಾಯತ ಸದಸ್ಯ ಸುರೇಶ ರಾಣಾಪೂರ, ಮಿಥುನ, ಸಂಗ್ರಾಮಪ್ಪ, ಉಪಸ್ಥಿತರಿದ್ದರು.