ಹರ್ ಘರ್ ತಿರಂಗಾ ಪಥಸಂಚಲನ


ಹುಬ್ಬಳ್ಳಿ,ಆ.13: ಅಮೃತಮಹೋತ್ಸವದ ಸ್ವಾತಂತ್ರ್ಯೋತ್ಸವ ನಿಮಿತ್ತವಾಗಿ ಹರ್ ಘರ್ ತಿರಂಗಾ ಹಾಗೂ ರಾಷ್ಟ್ರಾಭಿಮಾನದ ಜಾಗೃತಿಯ ಪಥಸಂಚಲನವು ನಗರದ ಚೆನ್ನಮ್ಮ ವೃತ್ತದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳಿಂದ ನಡೆಯಿತು.
ಪ್ರತಿ ಮನೆಯ ಅಂಗಳದಲ್ಲಿ ಅರಳಿದ ತ್ರಿವರ್ಣದ ರಂಗೋಲಿ, ಪ್ರತಿ ಮನೆಯ ಮೇಲೆ ರಾರಾಜಿಸಲಿ ತ್ರಿವರ್ಣ ಭಾರತದ ಧ್ವಜ ಎಂಬ ಪರಿಕಲ್ಪನೆಯನ್ನುಟ್ಟುಕೊಂಡು ಚಿನ್ಮಯ ಪಿಯು ಆ್ಯಂಡ್ ಡಿಗ್ರಿ ಕಾಲೇಜು ಮತ್ತು ಹಮ್ ಭಾರತಿ ಫೌಂಡೇಶನ್ ವತಿಯಿಂದ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.

ಇನ್ನೂ ಇದಕ್ಕೂ ಮುಂಚೆ ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ನಗರದ ಕೇಶ್ವಾಪೂರದ ಮಯೂರಿ ಎಸ್ಟೇಟ್ ಬಳಿಯ ಚಿನ್ಮಯ ಕಾಲೇಜಿನ ಆವರಣದಲ್ಲಿ ಪಥಸಂಚಲನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಚಿನ್ಮಯ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಗಿರೀಶ್ ಉಪಾಧ್ಯಾಯ, ಚಿನ್ಮಯ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ಅಧಿಕಾರಿ ವಿಶ್ವನಾಥ ರಾನಡೆ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.