ಹರ್ ಘರ್ ತಿರಂಗಾ ಅಭಿಯಾನ:ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಡಿ.ಸಿ. ಮನವಿ

ಕಲಬುರಗಿ,ಆ.13: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ “ನನ್ನ ಮಣ್ಣು ನನ್ನ ದೇಶ” ಕಾರ್ಯಕ್ರಮದ ಭಾಗವಾಗಿ ಇದೇ ಆಗಸ್ಟ್ 13 ರಿಂದ 15 ರವರೆಗೆ ಹರ್‌ ಘರ್ ತಿರಂಗಾ ಅಭಿಯಾನ ಕೈಗೊಂಡಿದ್ದು, ಜಿಲ್ಲೆಯ ಪ್ರತಿ ಮನೆಯ‌ ಮೇಲೆ ರಾಷ್ಟ್ರ ಧ್ವಜ ಹಾರಿಸಬೇಕೆಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮನವಿ ಮಾಡಿದ್ದಾರೆ.

ಆಗಸ್ಟ್‌ 13ರ‌ ಬೆಳಿಗ್ಗೆ 8 ಗಂಟೆಯಿಂದ ಆಗಸ್ಟ್‌ 15ರ ಸಂಜೆ 6 ಗಂಟೆ ವರೆಗೆ ಧ್ವಜ ಹಾರಿಸಬೇಕು. ಕಲಬುರಗಿ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ-ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ತಹಶೀಲ್ದಾರ ಕಚೇರಿಯಲ್ಲಿ ಸಾರ್ವಜನಿಕರು 25.50 ರೂ. ಗಳನ್ನು ಪಾವತಿ ಮಾಡಿ ರಾಷ್ಟ್ರಧ್ವಜವನ್ನು ಪಡೆಯಬಹುದಾಗಿದೆ.

ಸಾರ್ವಜನಿಕರು ತಮ್ಮ‌ ಮನೆ‌ ಮೇಲೆ ರಾಷ್ಟಧ್ವಜ ಹಾರಿಸುವ ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕೆಂದು ಕೋರಿರುವ ಅವರು, ಅಭಿಯಾನದಲ್ಲಿ ಪಾಲ್ಗೊಂಡಿರುವ ಕುರಿತು ಸಾರ್ವಜನಿಕರು ಸೆಲ್ಫಿ ಚಿತ್ರಗಳನ್ನು ತೆಗೆದು ಅಗಸ್ಟ್ 13 ರಂದು #Selfiewithtiranga, ಆಗಸ್ಟ್ 14 ರಂದು #har-dil-tiranga ಹಾಗೂ ಆಗಸ್ಟ್ 15 ರಂದು #har-ghar-tiranga ಹ್ಯಾಶಟ್ಯಾಗ್ ದೊಂದಿಗೆ harghartiranga.com ನಲ್ಲಿ ಅಪ್ಲೋಡ್ ಮಾಡಲು ಕೋರಲಾಗಿದೆ.