ಹರ್ಷವರ್ಧನ್‍ರಿಂದ ಮೃಗಾಲಯದಲ್ಲಿ ಹುಲಿ ದತ್ತು

ಮೈಸೂರು. ಜೂ.08: ನಟ ದರ್ಶನ್ ಅವರು ಕೆಲದಿನಗಳ ಹಿಂದೆ ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದು ಕೊಳ್ಳಬೇಕು ಎಂದು ಪ್ರಾಣಿ ಪ್ರಿಯರಲ್ಲಿ ಮನವಿ ಮಾಡಿದ್ದರು, ಅದರಂತೆ ಅವರ ಅಭಿಮಾನಿ ಯಾದ ಹರ್ಷವರ್ಧನ್ ಗೌಡ ಅವರು ಮೈಸೂರು ಮೃಗಾಲಯದಲ್ಲಿ ಬಿಳಿ ಹುಲಿಯನ್ನು ದತ್ತು ತೆಗೆದು ಕೊಂಡರು, ದತ್ತು ತೆಗೆದು ಕೊಂಡ ಬಿಳಿಹುಲಿಯ ಒಂದು ವರ್ಷಕ್ಕೆ ಆಗುವ ಪಾಲನೆಗೆ ಬೇಕಾದ ಒಂದು ಲಕ್ಷ ಹಣವನ್ನು ಪಾವತಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮೀ ಅವರ ಸಮ್ಮುಖದಲ್ಲಿ ಹಣವನ್ನು ಹಸ್ತಾಂತರಿಸಿದರು.
ಇದೆ ಸಂಧರ್ಭದಲ್ಲಿ ರಾಜೇಗೌಡ, ಚರಣ್ ರಾಜ್, ಸೇರಿದಂತೆ ಮೃಗಾಲಯದ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.