
ಕಲಬುರಗಿ,ಮೇ 4: ನರಸಿಂಹ ದೇವರನ್ನು ಪೂಜಿಸುವುದು ಮತ್ತು ಆರಾಧಿಸುವುದರಿಂದ ಮಾನಸಿಕ ದೈಹಿಕ ಶಕ್ತಿ ವೃದ್ಧಿಯಾಗಿ, ಭಯ ಮತ್ತು ಎಲ್ಲಾ ಅಡೆತಡೆಗಳು ದೂರವಾಗಿ ಶತ್ರಬಾಧೆ ನಾಶವಾಗುತ್ತದೆ ಎಂದು ಹರೇ ಶ್ರೀರಾಮ ಪಾರಾಯಣ ಸಂಘದ ಪ್ರಮುಖರಾದ ಶಾಮಾಚಾರ್ಯ ವಿ ಜೋಶಿ ವನದುರ್ಗ ನುಡಿದರು.
ಹರೆ ಶ್ರೀರಾಮ ಪಾರಾಯಣ ಸಂಘದಿಂದ ಕರುಣೇಶ್ವರ ನಗರದಲ್ಲಿ ಆಯೋಜಿಸಲಾದ ನರಸಿಂಹ ಜಯಂತಿ ಪ್ರಯುಕ್ತ ಮಾತನಾಡಿದ ಅವರು ತನ್ನ ಭಕ್ತರನ್ನು ಹಾಗೂ ಪ್ರಹ್ಲಾದ ರಾಜನನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಲು ಶ್ರೀ ಮಹಾ ವಿಷ್ಣುವಿನ ನಾಲ್ಕನೇ ಅವತಾರವಾಗಿ ವೈಶಾಖ ಮಾಸದ ಚತುರ್ಥಿಯಂದು ಅವತರಿಸಿದರು ಎಂದು ತಿಳಿಸಿದರು.ಪಾರಾಯಣ ಸಂಘದ ಸದಸ್ಯರೆಲ್ಲರೂ ನರಸಿಂಹ ಸ್ತುತಿಯನ್ನು 11 ಬಾರಿ ಪಠಿಸಿದರು.ಪಾರಾಯಣ ಸಂಘದ ಪ್ರಮುಖರಾದ ರವಿ ಲಾತೂರಕರ್, ಜಗನ್ನಾಥಾಚಾರ್ಯ ಸಗರ್, ಸುರೇಶ ಕುಲಕರ್ಣಿ, ಅನಿಲ್ ಕುಲಕರ್ಣಿ, ರಾಧಾಕೃಷ್ಣ ವಿ ಜೋಶಿ, ವಿನುತ್ ಜೋಶಿ, ಕಿಶನರಾವ್ ಕುಲಕರ್ಣಿ, ಗುರುರಾಜ್ ಮೇದಕ್, ಲಕ್ಷ್ಮಿಕಾಂತ್ ಕುಲಕರ್ಣಿ ರಾಮಚಂದ್ರ ಸೂಗೂರು, ಕೃಷ್ಣ ಮಳಖೆಡಕರ್, ನಿತೀಶ್ ಜೋಶಿ,ಸುನಂದ ಜೋಶಿ, ರಜನಿ ಕುಲಕರ್ಣಿ, ಅನುರಾಧ ವಿ ಜೋಶಿ ಸೇರಿದಂತೆ ಮಾತೆಯರು, ಯುವಕರು ಉಪಸ್ಥಿತರಿದ್ದರು.