ಹರೀಶ್ ಗೌಡರಿಂದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ

ಹುಣಸೂರು,ಜೂ.15:- ಶಾಸಕ ಜಿ ಡಿ ಹರಿಶ್ ಗೌಡ ಕಂದಾಯ ಇಲಾಖೆ ಅಧಿಕಾರಿಗಳನ್ನೆಲ್ಲ ನಗರಸಭೆ ಸಭಾಂಗಣದಲ್ಲಿ ಸಭೆ ಸೇರಿಸಿ ಪ್ರಗತಿ ಪರಿಶೀಲನೆ ನಡೆಸಿದ್ದಲ್ಲದೇ ಅಧಿಕಾರಿಗಳಿಗೆ ಅಭಿವೃದ್ಧಿ ಗುರಿಗಳನ್ನು ಕೂಡ ನೀಡಿದರು.
ತಾಲೂಕಿನ ರೈತರ ಆತ್ಮಹತ್ಯೆ ಬಗ್ಗೆ ಹಾಗೂ ಅವರಿಗೆ ನೀಡಿರುವ ಪರಿಹಾರ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿದ್ದಕ್ಕೆ ಅಧಿಕಾರಿಗಳು ತಬ್ಬಿಬ್ಬಾದ ಘಟನೆ ನಡೆಯಿತ್ತು.
ಕಳೆದ ಸಾಲಿನ ಮಳೆ ಹಾನಿಯಿಂದ ಬೆಳೆ ನಷ್ಟದ ಬಗ್ಗೆ ಮಾಹಿತಿ ಪಡೆದರು. ನಂತರ ಮಳೆಯಿಂದ ಕೆಲ ಹಾಡಿಗಳಲ್ಲಿ ಮನೆಗಳು ತುಂಬಾ ಹನಿಯಾಗಿದ್ದು, ಇದರ ಪರಿಹಾರಕ್ಕೆ ಕೆಲ ಗ್ರಾಮ ಲೆಕ್ಕಧಿಕಾರಿಗಳು ಹಾಗೂ ಕಂದಾಯ ನೀರಿಕ್ಷಕರು ಲಂಚ ಕೇಳುತ್ತಿರುವ ಆರೋಪ ಕೇಳಿ ಬಂದಿದೆ ಎಂದು ಎಚ್ಚರಿಸಿದ ಅವರು ಮುಂದೆ ಈ ರೀತಿ ಆಗಬಾರದು ಕೆಲವು ನಾಡ ಕಛೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ತಹಸೀಲ್ದಾರ್ಗೆ ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಸ್ಮಶಾನ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದ್ದಿರಾ ಇನ್ನೂ ಮುಂದೆ ಶ್ಮಸಾನ ಸಮಸ್ಯೆ ಬಂದರೆ ಗ್ರಾಮಲೆಕ್ಕಿಗರೆ ನೇರ ಹೊಣೆ, ಅಕ್ರಮ ಸಕ್ರಮ ಅರ್ಜಿಗಳು ಎಷ್ಟಿವೆ ಅದರಲ್ಲಿ ಎಷ್ಟು ಅರ್ಜಿಗಳನ್ನು ಸಕ್ರಮಗೊಳಿಸಿದ್ದೀರಾ ಎಷ್ಟು ಬಾಕಿ ಉಳಿದಿದೆ ಎಂಬ ಮಾಹಿತಿ ಪಡೆದು ಕಳೆದ ಐದು ವರ್ಷಗಳಿಂದ ಕೇವಲ 97 ಅರ್ಜಿಗಳು ಮಾತ್ರ ವಿಲೇವಾರಿ ಆಗಿವೆ ಉಳಿದ ಸಾವಿರಾರು ರೈತರು ದಿನನಿತ್ಯ ಅಲೆಯುತ್ತಿದ್ದಾರೆ ಕಾರಣ ತಿಳಿಸಿ ಅಲೇಯುವುದನ್ನು ತಪ್ಪಿಸಿ ಎಂದರು.
ಒಂದೇ ಕುಟುಂಬದ ನಾಲ್ವರಿಗೆ ಸಾಗುವಳಿ ಚೀಟಿ ನೀಡಿದ್ದೀರಿ ಇದರ ಬಗ್ಗೆ ದೂರಿದ್ದರು ಸಹ ಸಾಗುವಳಿ ಚೀಟಿ ನೀಡಿದ್ದೀರಿ ಇದು ಕಾನೂನು ಬಾಹಿರ, ಅಕ್ರಮವೆಸಗಿದ ಅಧಿಕಾರಿಗಳು ಮುಂದೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಜೂರಾಗಿರುವ ರೈತರ ಹತ್ತಿರ ಕಿಮ್ಮತ್ತು ಕಟ್ಟಿಸಿಕೊಂಡು ಸಾಗುವಳಿ ವಿತರಣೆ ಮಾಡಿ ಅನಾವಶ್ಯಕವಾಗಿ ರೈತರನ್ನು ತಿರುಗಿಸುವ ಕೆಲಸ ಆಗಬಾರದು ಎಂದು ತಹಸಿಲ್ದಾರ್ ರವರಿಗೆ ಸೂಚನೆ ನೀಡಿದರು
ತಾಲೂಕು ಕಛೇರಿಯಲ್ಲಿ ಮೂಲ ಕಡತಗಳೇ ಇಲ್ಲದಿರುವುದರಿಂದ ರೈತರ ಪಕ್ಕ ಪೆÇೀಡಿ ಮಾಡಲು ಕಷ್ಟವಾಗುತ್ತದೆ ಅದನ್ನು ತರಿಸಿ ಎಂದರು.
ಸರ್ಕಾರದ ಹಲವು ಪಿಂಚಣಿಗಳಿಗೆ ಲಂಚ ಕೇಳುತ್ತಿದ್ದಾರೆ ಎಂಬ ದೂರು ಕೇಳು ಬರುತ್ತಿದೆ ಇದು ನಾಚಿಕೆಗೇಡಿನ ಸಂಗತಿ ಅಂತಹ ಪ್ರಕರಣ ಮರುಕಳಿಸಿದರೆ ಮುಂದೆ ಸುಮ್ಮನಿರುವುದಿಲ್ಲ ಎಂದರು.
ಸಭೆಯಲ್ಲಿ ತಹಸಿಲ್ದಾರ್ ಡಾ ಅಶೋಕ್, ಗ್ರೇಡ್ 2 ತಹಸಿಲ್ದಾರ್ ನರಸಿಂಹಯ್ಯ ಉಪತಹಸೀಲ್ದಾರಗಳಾದ ಅರುಣ್, ಚೆಲುವರಾಜು, ಅರುಣ್ ಸಾಗರ್ ಶಿರಸ್ತೇದಾರ್ ಶಕೀಲಾಬಾನು, ಕಿರಣಕುಮಾರ್, ಶೋಭ, ಆರ್ ಐ ಗಳಾದ ನಂದೀಶ್, ಪುರುಷೋತ್ತಮ ರಾಜ್ ಅರಸು ಹಾಗೂ ಗ್ರಾಮ ಲೆಕ್ಕಧಿಕಾರಿಗಳು ಇದ್ದರು.