ಹರಿಹರ ಸ್ನೇಹಿತರಿಂದ ವಿನೂತನ ರೀತಿಯಲ್ಲಿ ಸಾಮಾಜಿಕ ಜಾಗೃತಿ

ಹರಿಹರ.ಮೇ.13; ಮಂಗನಿಂದ ಮಾನವ ಎಂಬುದನ್ನು ನಾವು ನೋಡಿದ್ದೇವೆ ಕೇಳಿದ್ದೇವೆ 3ಮನುಷ್ಯ ಕೋತಿಗಳು ಒಂದೊಂದು ತತ್ವವನ್ನು ಹೇಳುವುದಕ್ಕೆ ನಗರದ ಪಿಬಿ ರಸ್ತೆಯಲ್ಲಿರುವ ಡಿವೈಡರ್ ಮದ್ಯ ಪರಸ್ಪರ ಚರ್ಚೆಗಳನ್ನು ಮಾಡುತ್ತಾ ಕುಳಿತಿರುವ ದೃಶ್ಯ ಕಂಡುಬಂತು. 3 ಮನುಷ್ಯ ಕೋತಿಗಳು ಒಂದೊಂದು ತತ್ವವನ್ನು ಹೇಳುತ್ತದೆ ಅದು ಏನಪಾ ಅಂದರೆ 1ಕಿವಿ ಇನ್ನೊಂದು ಕಣ್ಣು ಮತ್ತೊಂದು ಬಾಯಿಯನ್ನು ಮುಚ್ಚಿಕೊಂಡು ರುವುದನ್ನು ನೋಡಿದರೆ ಇದರ ಅರ್ಥ  ಕೆಟ್ಟದ್ದನ್ನು ಕೇಳಬೇಡ ಕೆಟ್ಟದ್ದನ್ನು ನೋಡಬೇಡ ಕೆಟ್ಟದ್ದನ್ನು ಮಾತಾಡಬೇಡ ಸತ್ಯ ಶಾಂತಿ ಅಹಿಂಸೆ ಇವುಗಳು ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರ ಆದರ್ಶ ಮೌಲ್ಯಗಳನ್ನು ನೆನಪಿಸಿಕೊಂಡ ಕ್ಷಣ ಜಗದೀಶ್ ಮಾತನಾಡಿ  ವೈರಸ್ ನಿಂದ ಮೊದಲನೇ ವರ್ಷ ಜಗತ್ತೇ ತಲ್ಲಣವಾಗಿ ಜನರು ಭಯಭೀತರಾಗಿ ಸಾವು ನೋವುಗಳು ಸಂಭವಿಸಿದ್ದರೂ ನೆನಪು ಮಾಸಿಲ್ಲ ಎರಡನೇ ಹಂತದ ವೈರಸ್ಸಿನ ಅಲೆಗಳ ಅಬ್ಬರದಿಂದ ಮನುಷ್ಯರಿಗೆ ಪ್ರವೇಶಿಸಿ ಬಲಿಯನ್ನು ತೆಗೆದುಕೊಳ್ಳುತ್ತಿದೆ ಸರ್ಕಾರ ಸಾಕಷ್ಟು ಜಾಗೃತಿ ಎಚ್ಚರಿಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಿದರೂ ಜನರಿಗೆ ಬುದ್ದಿ ಬರ್ತಾ ಇಲ್ಲ ಮನೆಯಲ್ಲೇ ಸುರಕ್ಷಿತವಾಗಿರಿ ಜಾಗೃತರಾಗಿರಿ ಎಂದು ಬೊಬ್ಬೆ ಹೊಡೆದರೂ ನಮ್ಮ ಜನರ ಮಾತು ಕೇಳ್ತಾ ಇಲ್ಲ ತಲೆ ಗಟ್ಟಿ ಇದೆ ಎಂದು ಬಂಡೆಗೆ ಡಿಕ್ಕಿ ಒಡೆಯೋರಿಗೆ ಬುದ್ದಿ  ಹೇಳುವುದಕ್ಕೆ ಆಗುತ್ತದೆಯೇ ಇಲ್ಲ  ಪೋಲಿಸ್ ನಗರಸಭೆ ಕಂದಾಯ ಆರೋಗ್ಯ ಇಲಾಖೆ ವಾರಿಯರ್ಸ್ ಗಳು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಾರ್ವಜನಿಕರ ಆರೋಗ್ಯದ ಹಿತ ಕಾಪಾಡುವುದಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ ಇಲಾಖೆಗಳ ಅಧಿಕಾರಿಗಳಿಗೆ ಸಹಕಾರ ನೀಡುವದರಲ್ಲಿ ನಮ್ಮ ಜನ  ನಿರ್ಲಕ್ಷ್ಯ ವಹಿಸುತ್ತಿದ್ದಾರೆ .ನಾವು ನಮ್ಮ ಸ್ನೇಹಿತರು ಸೇರಿಕೊಂಡು ನಮ್ಮ ಕೈಲಾದಷ್ಟು ಇಲಾಖೆಗಳಿಗೆ ಸಹಕಾರ ನೀಡುತ್ತ ಬಂದಿರುತ್ತೇವೆ ನಮ್ಮ ಜನರು ಇಲಾಖೆಗಳೊಂದಿಗೆ ಕೈಜೋಡಿಸಿದರೆ ಮಹಾಮಾರಿ ಡೆಡ್ಲಿ ವೈರಸ್ ನ್ನು ಮುಕ್ತ ಮಾಡುವುದಕ್ಕೆ ಸಾಧ್ಯವಾಗುತ್ತದೆ  ಎಂದರು   ನಮಗೆ ಉತ್ತಮವಾದ ಗಾಳಿ ನೀರು ಬೆಳಕು ಮಳೆಯನ್ನುಸಕಾಲಕ್ಕೆ ಸರಿಯಾಗಿ  ಪ್ರಕೃತಿ ಮಾತೆ ನೀಡುತ್ತಾ ಪೋಷಣೆ ಮಾಡುತ್ತಾ ಬಂದಿರುತ್ತದೆ ಆದರೆ ಇಂದಿನ ದಿನಮಾನಗಳಲ್ಲಿ ಪ್ರಕೃತಿ ಮಾತೆಯನ್ನು ಪೂಜಿಸಿಬದಲು ಗಿಡ ಮರಗಳನ್ನು  ರಸ್ತೆ ಅಗಲೀಕರಣ ನೆಪದಲ್ಲಿ ಮಾರಣಹೋಮ ಮಾಡುತ್ತಾ  ಮಾತೆಯನ್ನು ಮಾರಣಹೋಮ ಮಾಡುತ್ತಾ ಬಂದಿದ್ದು  ಇದರಿಂದ ಗಿಡ ಮರಗಳು ಹಚ್ಚ ಹಸಿರು ಇಲ್ಲದೆ ವಿವಿಧ ರೀತಿಯಲ್ಲಿ  ಸಾಂಕ್ರಾಮಿಕ ರೋಗಗಳು ಹರಡುವುದಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗಿದೆ. ವೈರಸ್ ಮುಕ್ತ ಮಾಡುವುದಕ್ಕೆ ಮನೆಯಲ್ಲೇ ಇರಿ  ಅಂತರ ಕಾಪಾಡಿ  ಎಚ್ಚರಿಕೆಯಿಂದಿರೋಣ  ಜಾಗೃತರಾಗೋಣ ಒಳ್ಳೆಯ ಸತ್ಕಾರಗಳನ್ನು ಮಾಡೋಣ ಧರ್ಮದಿಂದ ನಡೆಯೋಣ ನೊಂದವರಿಗೆ ನೆರವು ನೆರವಾಗುವಂಥ ಕಾರ್ಯಗಳನ್ನು ಮಾಡೋಣ ಎಂದು ರುದ್ರೇಶ್ ಸುಂದ್ರೇಶ್ ಸ್ನೇಹ ಬಳಗದವರು ಹೇಳಿದರು