ಹರಿಹರ ರೈಲ್ವೇ ನಿಲ್ದಾಣ ಮೇಲ್ದರ್ಜೆಗೆ

ಸಂಜೆವಾಣಿ ವಾರ್ತೆ
ದಾವಣಗೆರೆ. ಆ.8; ಅಮೃತ ಭಾರತ್ ಯೋಜನೆಯಡಿ ಹರಿಹರ ರೈಲ್ವೇ ನಿಲ್ದಾಣದ ಅಭಿವೃದ್ಧಿಗೆ 25 ಕೋಟಿ ಮೀಸಲಿಡಲಾಗಿದ್ದು ಇಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.ಹರಿಹರ ರೈಲ್ವೇ  ನಿಲ್ದಾಣದ ಪ್ಲಾಟ್ ಫಾರ್ಮ್ , ಮೇಲ್ಚಾವಣಿ ,ಲಿಫ್ಟ್ ,ಪುಡ್ ಕೋರ್ಟ್, ಉಚಿತ ವೈಫೈ ಸೇರಿದಂತೆ ಹಲವು ಸೌಲಭ್ಯಗಳ ವಿಸ್ತರಣೆ ಮಾಡಲಾಗುತ್ತಿದೆ
ಹರಿಹರದಲ್ಲಿ ನಡೆದ ಇಂದಿನ ಕಾರ್ಯಕ್ರಮದಲ್ಲಿ ದಾವಣಗೆರೆ ಸಂಸದ ಜಿಎಂ  ಸಿದ್ದೇಶ್ವರ,  ಹರಿಹರ ಶಾಸಕ ಬಿಪಿ ಹರೀಶ್,ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ‌ ಸೇರಿದಂತೆ ಅನೇಕರಿದ್ದರು.