ಹರಿಹರ ಬಿಜೆಪಿ ಯುವ ಮೋರ್ಚಾದಿಂದ ಮೌನಾಚರಣೆ

 ಹರಿಹರ.ಜು.೨೮; ತಾಲೂಕಿನಲ್ಲಿ ಬಿಜೆಪಿ ಯುವ ಮೋರ್ಚಾ ಹರಿಹರ ನಗರ ಹಾಗು ಗ್ರಾಮಾಂತರ ಘಟಕದಿಂದದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸಕ್ರಿಯ ಕಾರ್ಯಕರ್ತನಾಗಿದ್ದ ಪ್ರವೀಣ್ ನೆಟ್ಟಾರ್ ಅವರ ಹತ್ಯೆಯನ್ನು ಖಂಡಿಸಿ ಎರಡೂ ನಿಮಿಷಗಳ ಕಾಲ ಮೌನಾಚರಣೆ ಮಾಡಿ ಗೌರವ ಸಲ್ಲಿಸಲಾಯಿತು.. ನಂತರ ಯುವ ಮೋರ್ಚಾದ ಎಲ್ಲಾ ಸದಸ್ಯರು ರಾಜೀನಾಮೆ ನೀಡಿದರು.ಈ ಸಂದರ್ಭದಲ್ಲಿ ನಗರ ಮತ್ತು ಗ್ರಾಮಾಂತರ  ಘಟಕದ ಅಧ್ಯಕ್ಷರೂ, ಹಾಗು ಮಹಿಳಾ ಮೋರ್ಚಾ, ಹಾಗು ಎಲ್ಲಾ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Attachments area